Recent Posts

Tuesday, January 21, 2025
ಸುದ್ದಿ

ಅಂತರ್ ಜಿಲ್ಲಾ ಗೋ ಕಳ್ಳರ ಬಂಧನ : ವೇಣೂರು ಪೊಲೀಸರ ಕಾರ್ಯಾಚರಣೆ – ಕಹಳೆ ನ್ಯೂಸ್

ವೇಣೂರು: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ದನ ಕಳ್ಳತನ ಪ್ರಕರಣಗಳಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿ, ನಾರಾವಿ ಕಡೆಗಳಲ್ಲಿ ದನ ಕಳ್ಳತನವಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳನ್ನು ಮೂಡಬಿದ್ರೆಯ ಅಹ್ಮದ್ ಫೈಜಲ್, ಮಂಗಳೂರಿನ ಕಲಂದರ್ ಶಾಫಿ, ಅರಾಫತ್ ಅಲಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಬ್ರೀಝಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತಿನ ಮೌಲ್ಯ 8,00,000 ರೂ ಎಂದು ಅಂದಾಜಿಸಲಾಗಿದೆ. ಈ ಪೈಕಿ ಆರೋಪಿ ಅಹ್ಮದ್ ಫೈಜಲ್ ಎಂಬಾತನ ಮೇಲೆ ಸುರತ್ಕಲ್, ಹೆಬ್ರಿ ಪೊಲೀಸ್ ಠಾಣೆಗಳಲ್ಲಿ, ಕಲಂದರ್ ಶಾಫಿ ಎಂಬಾತನ ಮೇಲೆ ಹೆಬ್ರಿ, ಪಣಂಬೂರು ಠಾಣೆಗಳಲ್ಲಿ, ಅರಾಫತ್ ಅಲಿ ಎಂಬಾತನ ಮೇಲೆ ಹೆಬ್ರಿ, ಕಂಕನಾಡಿ, ಸುರತ್ಕಲ್, ಪಣಂಬೂರು, ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಅವರ ಬಂಧನ ಕಾರ್ಯ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು