Tuesday, January 21, 2025
ಸಿನಿಮಾ

ಆಸ್ಟ್ರೇಲಿಯಾದ ಮೆಲ್ಬರ್ನ್ ನ ಭಾರತೀಯ ಚಿತ್ರೋತ್ಸವದಲ್ಲಿ `ಒಂದಲ್ಲಾ ಎರಡಲ್ಲಾ’ ಕನ್ನಡ ಚಿತ್ರ – ಕಹಳೆ ನ್ಯೂಸ್

ಕನ್ನಡದ ಚಿತ್ರವೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಭಾಗ್ಯ ಪಡೆದಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್‍ ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ `ಒಂದಲ್ಲಾ ಎರಡಲ್ಲ ಚಿತ್ರ ಪ್ರದರ್ಶನಗೊಳ್ಳಲಿದೆ.
‘ರಾಮಾ ರಾಮಾ ರೇ’ ಮತ್ತು ಹೆಬ್ಬುಲಿಯಂತಹ ಪಕ್ಕಾ ಕಮರ್ಷಿಯಲ್ ಮತ್ತು ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ ತಂಡ ‘ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ನಿರ್ಮಿಸಿದೆ. ಡಿ.ಸತ್ಯಪ್ರಕಾಶ್ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಈ ಹಿಂದೆ ಸುದೀಪ್ ನಟನೆಯ ಹೆಬ್ಬುಲಿ ಚಿತ್ರವನ್ನು ಇವರೇ ನಿರ್ಮಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮೆಚ್ಚಿನ ಹಸು ಮತ್ತು ಸಮೀರ್ ಎಂಬ ಏಳು ವರ್ಷದ ಬಾಲಕನ ನಡುವಿನ ಸಂಬಂಧಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಹಸುವನ್ನು ಹುಡುಕಲು ಹೊರಡುವ ಮುಗ್ಧ ಬಾಲಕನಿಗೆ ಸಮಾಜ ಮತ್ತು ಜೀವನದ ವಿವಿಧ ಮುಖಗಳ ಪರಿಚಯವಾಗುತ್ತದೆ. ಹಸು ಮತ್ತು ಬಾಲಕನ ಸುತ್ತ ಈ ಚಿತ್ರ ಕಥೆ ಗಿರಕಿ ಹೊಡೆಯುತ್ತದೆ. ಹಸು ಕಳೆದುಕೊಂಡು ಪರಿತಪಿಸುವ ಮುಗ್ಧ ಬಾಲಕನ ಪಾತ್ರವನ್ನು ರೋಹಿತ್ ಪಾಂಡವಪುರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವ ರಂಗಭೂಮಿ ಹಿನ್ನಲೆಯ ಕಲಾವಿದರ ಮನೋಜ್ಞ ಅಭಿನಯ ಈ ಚಿತ್ರಕ್ಕೆ ನೈಜತೆ ತಂದುಕೊಟ್ಟಿದೆ. ಮೆಲ್ಬರ್ನ್‍ ನಲ್ಲಿ ಆಗಸ್ಟ್ 8ರಿಂದ 17ರ ವರೆಗೆ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಜೊತೆಗೆ ಇತರ ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿದೆ.