Tuesday, January 21, 2025
ಸುದ್ದಿ

ಎಂಟರ ಘಟ್ಟಕ್ಕೆ ಸಿಂಧು ಲಗ್ಗೆ – ಕಹಳೆ ನ್ಯೂಸ್

ಜಕಾರ್ತ: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಮೂರು ಗೇಮ್‍ಗಳ ಹೋರಾಟದಲ್ಲಿ ಡೆನ್ಮಾರ್ಕ್‍ನ ಮಿಯಾ ಬ್ಲಿಚ್‍ಫೆಲ್ಟ್ ಅವರನ್ನು ಸೋಲಿಸಿ ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಕ್ವಾಟರ್‍ಫೈನಲ್ ತಲುಪಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 21-14, 17-21, 21-11 ರಲ್ಲಿ ಬ್ಲಿಚ್‍ಫೆಲ್ಟ್ ಅವರನ್ನು ಸೋಲಿಸಿದರು. 62 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ, ಗೆಲುವಿಗೆ ಸಿಂಧು ತಮ್ಮೆಲ್ಲಾ ಅನುಭವ ಬಳಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು