ಜ. 20, 21 ರಂದು ಕುಲಶೇಖರ ದೇವಿ ಪ್ರಸಾದ ನಿಲಯದಲ್ಲಿ ವರ್ಷಾವದಿ ಚಂಡಿಕಾಯಾಗ – ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಮಂಗಳೂರು : ಕುಲಶೇಕರದಲ್ಲಿ ವೇದಾಂತ ವಿದ್ವಾನ್ ಸುರೇಶ ಬಾರಿತ್ತಾಯರ ಮನೆ ( ಬಲಿಮೆದ ಬಟ್ರಮನೆ ) ದೇವಿ ಪ್ರಸಾದ ನಿಲಯದಲ್ಲಿ ವರ್ಷಂಪ್ರತಿ ನಡೆಯುವ ‘ ಚಂಡಿಕಾಯಾಗ ‘ ಮತ್ತು ‘ ಶ್ರೀ ದೇವಿ ಮಹಾತ್ಮೆ ‘ ಯಕ್ಷಗಾನ ಬಯಲಾಟವು ಜನವರಿ 20 ಮತ್ತು 21 ರಂದು ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.
ಹೇಮಲಾಂಬಿ ನಾಮ ಸಂವತ್ಸರದ ಮಕರ ಮಾಸದ ಮಾಘ ಶುದ್ಧದ ಜನವರಿ 20 ರಂದು ಶನಿವಾರ ಚಂಡಿಕಾಯಾಗವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಮತ್ತು 21 ಆದಿತ್ಯವಾರದಂದು ರಾತ್ರಿ 8.30 ರಿಂದ ಕಟೀಲು ದುರ್ಗಾಪರಮೇಶ್ವರಿ ದಶಾವತಾರಿ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯಕಥಾನಕವನ್ನು ಆಡಿ ತೋರಿಸಲಿದ್ದಾರೆ.