Thursday, November 14, 2024
ಸುದ್ದಿ

ಆಳ್ವಾಸ್ ವಿರಾಸತ್ | ದ್ವೇಷ ಬಿಟ್ಟು ಸಾಮರಸ್ಯದ ಬದುಕಿನ ದೇಶ ಕಟ್ಟೋಣ – ಡಾ. ವೀರೇಂದ್ರ ಹೆಗ್ಗಡೆ

 

ಮೂಡುಬಿದಿರೆ: ನಾವು ಇಂದು ದೇಶ ಕಟ್ಟುವ ಮೊದಲು ದ್ವೇಷ ಬಿಡಬೇಕು. ದ್ವೇಷ ಬಿಡಬೇಕಾದರೆ ನಾವು ಸಮಾನತೆಯ, ಸಾಮರಸ್ಯದ ಮನಸ್ಥಿತಿ ಹೊಂದಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಶುಕ್ರವಾರ ಮೂಡಬಿದಿರೆಯ ಪುತ್ತಿಗೆ ವಿವೇಕಾನಂದ ನಗರದಲ್ಲಿನ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ 24ನೇ ವರ್ಷದ ಆಳ್ವಾಸ್ ವಿರಾಸತ್ ನ ರಾಷ್ಟ್ರೀಯ ಸಾಂಸ್ಕ್ರತಿಕ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗಾಲ್ಯಾಂಡ್ ರಾಜ್ಯಪಾಲರಾದ ಪಿ.ಬಿ.ಆಚಾರ್ಯ ಅವರು 24ನೇ ವರ್ಷದ ಆಳ್ವಾಸ್ ವಿರಾಸತ್ ಅನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಶಸಕ ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಡಾ.ಎಂಎನ್ ರಾಜೇಂದ್ರ ಕುಮಾರ್, ಎಜೆ ಶೆಟ್ಟಿ ಸಮೂಹ ಸಂಸ್ಥೆಯ ಎ.ಜೆ.ಶೆಟ್ಟಿ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡಾ.ಎಂ. ಮೋಹನ್ ಆಳ್ವಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅಥಿತಿಗಳನ್ನು ಸ್ವಾಗತಿಸಿದರು.

Leave a Response