ಶ್ರೀನಗರ: ಅಮಾಯಕರು, ಯೋಧರನ್ನು ಹೊರತುಪಡಿಸಿ, ಭ್ರಷ್ಟ ರಾಜಕಾರಣಿಗಳನ್ನು ಭಯೋತ್ಪಾದಕರು ಗುಂಡಿಟ್ಟು ಕೊಲ್ಲಲಿ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೀಡಿರುವ ಹೇಳಿಕೆ, ಭಾರಿ ವಿವಾದಕ್ಕೆ ಕಾರಣವಾಗಿದೆ. ತಮ್ಮ ಕೈಗೆ ಬಂದೂಕನ್ನು ಎತ್ತಿಕೊಂಡಿರುವ ಉಗ್ರರು ಹುಡುಗರು ತಮ್ಮದೇ ಜನರನ್ನು ಕೊಲ್ಲುತ್ತಿದ್ದಾರೆ. ಭದ್ರತಾ ಅಧಿಕಾರಿಗಳನ್ನು, ವಿಶೇಷ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈಯುತ್ತಿದ್ದಾರೆ. ಈ ಕುರಿತು ಆ ಹುಡುಗರನ್ನು ಪ್ರಶ್ನಿಸಿದರೆ, ಯಾರು ಕಾಶ್ಮೀರದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೋ ಅಂತಹವರನ್ನು ಕೊಂದು ಬಿಡಿ ಎಂದು ಮಲಿಕ್ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ಎಂದು ಉತ್ತರಿಸುತ್ತಾರೆ.
ಈ ಹೇಳಿಕೆ ಇದೀಗ ಭಾರಿ ವಿವಾದ ಸೃಷ್ಟಿಸುತ್ತಿದ್ದಂತೆಯೇ, ಇಂದು ಸ್ಪಷ್ಟನೆ ನೀಡಿದ ರಾಜ್ಯಪಾಲ ಮಲ್ಲಿಕ್, ರಾಜಕಾರಣಿಗಳ ಭ್ರಷ್ಟಾಚಾರಕ್ಕೆ ರೋಸಿ ಹೋಗಿ ಆಕ್ರೋಶ ಮತ್ತು ಒತ್ತಡಕ್ಕೊಳಗಾಗಿ ನಾನು ಆ ರೀತಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.
ಒಬ್ಬ ರಾಜ್ಯಪಾಲರಾಗಿ ತಾವು ಇಂತಹ ಹೇಳಿಕೆಗಳನ್ನು ನೀಡಬಾರದು. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯ ಅದೇ ಆಗಿದೆ. ಆದರೆ, ಹಲವು ರಾಜಕೀಯ ಮುಖಂಡರು, ದೊಡ್ಡ, ದೊಡ್ಡ ಅಧಿಕಾರಿಗಳು ಇಲ್ಲಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ.