Saturday, November 23, 2024
ಕ್ರೀಡೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ ಹಿಮಾ ದಾಸ್ – ಕಹಳೆ ನ್ಯೂಸ್

ಹೊಸದಿಲ್ಲಿ: ಭಾರತೀಯ ಸ್ರ್ಟಿಂಟರ್ ಹಿಮಾ ದಾಸ್ ಜುಲೈ ತಿಂಗಳಲ್ಲಿ ಪ್ರಚಂಡ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. 20 ದಿನಗಳ ಅಂತರದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ಸ್‍ನಲ್ಲಿ ತನ್ನ ನೆಚ್ಚಿನ 400 ಮೀ. ಓಟದಲ್ಲಿ ಪಾಲ್ಗೊಂಡ ಹಿಮಾ ದಾಸ್ ಈ ತಿಂಗಳ ಶ್ರೇಷ್ಠ ಸಮಯದೊಂದಿಗೆ ಅಂದರೆ 52.09 ಸೆಕೆಂಡ್‍ನಲ್ಲಿ ಚಿನ್ನ ಗೆದ್ದರು. ಆದರೆ ಸ್ವಲ್ಪದರಲ್ಲಿ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆಗಳಿಸುವ ಅವಕಾಶವನ್ನು 51.80 ಸೆಕೆಂಡ್‍ನಲ್ಲಿ ಕಳೆದುಕೊಂಡರು. ಕಳೆದ ಜಕಾರ್ತಾ ಏಶ್ಯನ್ ಗೇಮ್ಸ್ ನಲ್ಲಿ ಹಿಮಾ ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ 50.79 ಸೆಕೆಂಡ್‍ನಲ್ಲಿ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುರೋಪ್‍ನಲ್ಲಿ ಜು. 2ರಂದು ನಡೆದ 200 ಮೀ. ರೇಸ್‍ನಲ್ಲಿ ಪಾಲ್ಗೊಂಡಿರುವುದು ಹಿಮಾ ದಾಸ್ ಅವರ ಚೊಚ್ಚಲ ಸ್ಪರ್ಧೆಯಾಗಿತ್ತು. ನಂತರ ಜು. 7, 13 ಮತ್ತು 17ರಂದು ನಡೆದ ಸ್ಪರ್ಧೆಯ 200 ಮೀ.ನಲ್ಲೂ ಚಿನ್ನ ಗೆದ್ದು ಸಾಹಸ ಮೆರೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ದಿಂಗ್ ಎಕ್ಸ್ ಪ್ರೆಸ್’ ಖ್ಯಾತಿಯ ಅಸ್ಸಾಂನ 19ರ ಹರೆಯದ ಹಿಮಾ ದಾಸ್ 400 ಮೀ.ನಲ್ಲಿ ಇದೇ ಮೊದಲ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅವರು ಕಳೆದ ಎಪ್ರಿಲ್‍ನಲ್ಲಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಏಶ್ಯನ್ ಅಥ್ಲ್ಲೆಟಿಕ್ ಚಾಂಪಿಯನ್‍ಶಿಪ್‍ನ 400 ಮೀ. ಸ್ಪರ್ಧೆಯಲ್ಲಿ ಗುರಿ ತಲುಪಲು ಒದ್ದಾಡಿದ್ದರು.