ಪುತ್ತೂರು: ಸ್ವಪರಿವರ್ತನೆಯಾದಗ ಮಾತ್ರ ಸಮಾಜ ಸುಧಾರಣೆಯಾಗಬಹುದು.. ಇದನ್ನು ಅರಿತ ಕೆಲವು ಯುವಕರು, ಸಮಾಜದ ಒಳಿತಿಗಾಗಿ ಏನಾದರು ಮಾಡಬೇಕು ಎಂದುಕೊಂಡು, ಹುಟ್ಟು ಹಾಕಿದ್ದೇ ವಜ್ರ ತೇಜಸ್ಸ್ ಪುತ್ತೂರು ಸಂಘ. ಇದೀಗ ವಜ್ರ ತೇಜಸ್ಸ್ ಗ್ರೂಪ್ ತೀರ ಅನಾರೋಗ್ಯದಿಂದ ಬಳಲುತಿದ್ದ, ಕೋಡಿಂಬಾಡಿಯ ಕೃಷ್ಣ ನಾಯ್ಕ ಕುಟುಂಬಕ್ಕೆ 10 ಸಾವಿರ ರೂಗಳ ಚೆಕ್ ವಿತರಿಸಿ ಮಾನವೀಯತೆ ಮೆರೆದಿದೆ.
19ನೇ ಸಹಾಯಧನದ ಕಿರು ಪರಿಚಯದೊಂದಿಗೆ
ಕೋಡಿಂಬಾಡಿಯಲ್ಲಿ ವಾಸವಾಗಿರುವ ಕೃಷ್ಣ ನಾಯ್ಕ ಅವರಿಗೆ ತೀರ ಬಡತನ. ತನ್ನ ಪತ್ನಿ, ಎರಡು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನ ಜೊತೆ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಕೃಷ್ಣ ನಾಯ್ಕ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಹಾಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀರ ಸುಧಾರಿಸಿಕೊಳ್ಳದೆ, ಮನೆಯಲ್ಲೆ ಹಾಸಿಗೆ ಹಿಡಿದಿದ್ದಾರೆ. ಸದ್ಯ ಅವರಮನೆಯ ಪರಿಸ್ಥಿತಿ ಶೋಚನೇಯ. ಇದನ್ನು ಮನಗಂಡ ಕೃಷ್ಣ ಗಿರಿ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಚೆಕ್ ವಿತರಣೆ ಸಂದರ್ಭದಲ್ಲಿ ವಜ್ರ ತೇಜಸ್ಸ್ ಪುತ್ತೂರು ಗ್ರೂಪಿನ ಸದಸ್ಯರಾದ ನವೀನ್ ಕಲಾಲ್, ಧನ್ಯಕುಮಾರ್ ಬೆಳಂದೂರು, ಕೊಡಿಂಬಾಡಿ ಕೃಷ್ಣ ಗಿರಿಯ ವಿ.ಎಚ್.ಪಿ, ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು