Saturday, November 23, 2024
ಸುದ್ದಿ

ಬೃಹತ್ ವೈದ್ಯಕೀಯ ತಪಾಸಣಾ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಮಂಗಳೂರು: ನೆಹರು ಯುವ ಕೇಂದ್ರ ಮಂಗಳೂರು ಮತ್ತು ಮಲೆನಾಡು ಎಜುಕೇಶನ್ ಸೊಸೈಟಿ, ವಿದ್ಯಾಗಣಪತಿ ಸೇವಾ ಸಮಿತಿ ಮತ್ತು ಎ.ಜೆ. ಆಸ್ವತ್ರೆ ಮತ್ತು ಸಂಶೋಧನಾ ಕೇಂದ್ರ, ಎ.ಜೆ ಕ್ಯಾನ್ಸರ್ ಇನ್ಸ್ ಟ್ಯೂಟ್, ಎ.ಜೆ. ಡೆಂಟಲ್ ಸೈನ್ಸ್, ಎ.ಜೆ. ಮೆಡಿಕಲ್ ಸೈನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ, ಜುಲೈ 21ರಂದು ಬೃಹತ್ ವೈದ್ಯಕೀಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮನ್ನು ಅನುದಾನಿತ ಖಾ.ಹಿ.ಪ್ರಾ. ಶಾಲಾ ವಠಾರ ಮಲವಂತಿಗೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಸಂದೇಶ್ ವಿ.ಜಿ. ವೃತ್ತ ನಿರೀಕ್ಷಕರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

500ಕ್ಕೂ ಅಧಿಕ ಮಂದಿಗೆ, ವಿವಿಧ ಬಗೆಯ ತಪಾಸಣೆಯನ್ನು ಮಾಡಲಾಯಿತು. ದಿಲೀಪ್ ಕುಮಾರ್ ಅವರಿಂದ 136ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹರೀಶ್ ಎಳನೀರು ಅವರ ನೇತೃತ್ವದಲ್ಲಿ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ವಿಧವಾ ವೇತನ, ಮನಸ್ವಿನಿ ಹಾಗೂ ಮೊದಲಾದ ಪಿಂಚಣಿ ಸೌಲಭ್ಯಗಳ ಮಾಹಿತಿ ಮತ್ತು ಅರ್ಜಿ ಸ್ವೀಕರಿಸಲಾಯಿತು. ದಿಡುಪೆ ಮತ್ತು ಹತ್ತಿರದ ಊರಿನವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.