Sunday, November 24, 2024
ಸುದ್ದಿ

ತಿರುವು ರಸ್ತೆಯಲ್ಲಿ ಸಾಲು ಸಾಲು ಅಪಘಾತ : ರಸ್ತೆ ದುರಸ್ಥಿ ಮಾಡಲು ಅಧಿಕಾರಿಗಳಿಗೆ ಮನವಿ ಮಾಡಿದ ಗ್ರಾಮಸ್ಧರು – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಬಡಿಕ್ಕಿಲ ಪೂರ್ಲಡ್ಕ ಎಂಬಲ್ಲಿನ ತಿರುವು ರಸ್ತೆಗೆ ಗುಡ್ಡ ಕುಸಿದಿದೆ. ಇದರಿಂದಾಗಿ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು ಎದುರಿನಿಂದ ಬರುವ ವಾಹನಗಳಿಗೆ ಕಾಣಿಸದೇ ಹಲವಾರು ಅಪಘಾತಗಳು ಸಂಭವಿಸುತ್ತಿದೆ. ಅಲ್ಲದೆ ಈ ಪ್ರದೇಶದಲ್ಲಿ ಏಕಪತ ಕಿರು ಸೇತುವೆಯಿದ್ದು, ಅದು ಶಿಥಿಲಾವಸ್ಥೆಗೆ ತಲುಪಿದೆ. ಈ ಸೇತುವೆಯಲ್ಲಿ ನಾಲ್ಕು ಚಕ್ರಗಳ ವಾಹನಗಳು ಎದುರು ಬದುರು ಚಲಿಸುವುದು ಅಸಾಧ್ಯವಾಗಿದೆ. ಹೀಗಾಗಿ ಮುಂಜಾಗೃತೆ ಹಾಗೂ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಧರು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಸ್ಧರ ಬೇಡಿಕೆ ಯಾವುವೆಂದರೆ :- ಅಪಾಯಕಾರಿ ಪ್ರದೇಶದಿಂದ 150 ಮೀಟರ್ ಅಂತರದಲ್ಲಿ ಬ್ಯಾರಿಗೇಟ್ ಆಳವಡಿಸಬೇಕು. ತಿರುವು ರಸ್ತೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಏಕಪತ ಸೇತುವೆಯನ್ನು ದ್ವಿಪತಕ್ಕೆರಿಸಿ ಹೊಸಸೇತುವೆ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಅನ್ನೋದು ಇಲ್ಲಿನ ಗ್ರಾಮಸ್ಧರ ಬೇಡಿಕೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಎಲ್ಲಾ ಕೆಲಸಗಳಿಗೆ ಪಿ.ಡಬ್ಲ್ಯೂ.ಡಿ ವತಿಯಿಂದ ಅನುದಾನ ಒದಗಿಸುವ ಪ್ರಕ್ರಿಯೆ ಆಗಬೇಕಿದೆ. ಈ ಹಿಂದೆಯೇ ರಸ್ತೆ ಕಾಮಗಾರಿ ವಿಚಾರವನ್ನ ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್, ಕುಶಾಲಪ್ಪ ಕಜೆ, ಉಮೇಶ್ ಪೂಜಾರಿ ಮುರುವ ಹಾಗೂ ಇತರ ಸದಸ್ಯರು ಪಿ. ಡಬ್ಲ್ಯೂ.ಡಿ. ಇಂಜಿನಿಯರ್ ಗಮನಕ್ಕೆ ತಂದಿದ್ದಾರೆ. ಆದರೆ ಈವರೆಗೆ ಪಿ.ಡಬ್ಲ್ಯೂ ಡಿ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಹೀಗಾಗಿ ಆದಷ್ಟೂ ಬೇಗ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಮುಂಜಾಗೃತಾ ಕ್ರಮವಾಗಿ ಅಪಾಯಕಾರಿ ಪ್ರದೇಶದಲ್ಲಿ ಬ್ಯಾರಿಕೇಡ್‍ಗಳ ವ್ಯವಸ್ಥೆಯಾಗಬೇಕಾಗಿದೆ. ಈ ಬೇಡಿಕೆಯನ್ನು ಅಧಿಕಾರಿಗಳು ಈಡೇರಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಪಂಚಾಯತ್ ಸದಸ್ಯರು ಶ್ಯಾಮ್ ಪ್ರಸಾದ್, ಕುಶಾಲಪ್ಪ ಕಜೆ, ಉಮೇಶ್ ಪೂಜಾರಿ, ಹಾಗೂ ಗ್ರಾಮಸ್ಧರು ಎಚ್ಚರಿಸಿರುತ್ತಾರೆ.