Sunday, November 24, 2024
ಸುದ್ದಿ

ಆರೋಪಿ ಸಹಿತ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು – ಕಹಳೆ ನ್ಯೂಸ್

ಮಂಗಳೂರು:ಸೆಂಥಿಲ್ ಕುಮಾರ್ ಅವರು ಬೆದರಿಸಿ ಹಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 14-07-2019 ರಂದು ಮೊಗರು ಗ್ರಾಮದ, ಮಳಲಿ ಸೈಟ್ ಬಳಿ ಹೋಗುತ್ತಿರುವಾಗ ಎರಡು ಬೈಕ್‍ನಲ್ಲಿ ಬಂದ ನಾಲ್ಕು ಯುವಕರು ಸೆಂಥಿಲ್ ಕುಮಾರ್ ಅವರಿಗೆ ತಲ್ವಾರ್ ತೋರಿಸಿ 2,05.000 ರೂಪಾಯಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 138/19 ಕಲಂ 397 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ಪ್ರಮುಖ ರುವಾರಿ ಗಡಿಪಾರುಗೊಂಡ ಕುಖ್ಯಾತ ಆರೋಪಿ ರೌಡಿ ಶೀಟರ್ ಮಹಮ್ಮದ್ ಖಾಲಿದ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4 ಕೊಲೆ ಯತ್ನ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣ, ಬಜಪೆ ಪೊಲೀಸ್ ಠಾಣೆಯಲ್ಲಿ 1 ಕೊಲೆ ಯತ್ನ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿದೆ. ಈತನು ಗಡಿಪಾರುಗೊಂಡಿದ್ದರೂ ತಲೆಮರೆಸಿಕೊಂಡು ಇತರ ಸಹಚರರೊಂದಿಗೆ ಸೇರಿ ಮಳಲಿಯಲ್ಲಿ ಫೈನಾನ್ಸ್‍ದಾರನನ್ನು ದರೋಡೆ ಮಾಡಿದ್ದು, ಈತನನ್ನು ಉಳಾಯಿಬೆಟ್ಟು ಬಳಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿ ದರೋಡೆ ಮಾಡಿದನಗದು ರೂ 50,000/- ,ಎರಡು ಮೊಬೈಲ್ ಪೋನ್, ತಲವಾರು- 1, ಚೂರಿ- 1 ಈ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಬ್ದುಲ್ ಅಜೀಜ್ ಅಲಿಯಾಸ್ ನೌಷಾದ್, ಮಹಮ್ಮದ್ ಮುಸ್ತಾಫ ಅಲಿಯಾಸ್ ಮುಸ್ತಾಫ, ಆಶ್ಲೇಷ್ ಎ ಕೋಟ್ಯಾನ್ ಅಲಿಯಾಸ್ ಅಣ್ಣು, ಮಹಮ್ಮದ್ ಆಶಿಕ್ ಎಂಬವರನ್ನು ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ಯ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಐ.ಪಿ.ಎಸ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ. ಐ.ಪಿ.ಸಿ (ಕಾಮತ್ತುಸು) ಮತ್ತು ಲಕ್ಷ್ಮೀ ಗಣೇಶ್. ಕೆ.ಎಸ್.ಪಿ.ಎಸ್‍ರವರ ಹಾಗೂ ಉತ್ತರ ಉಪವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಐ.ಪಿ.ಎಸ್ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯ ಮಾಡಲಾಗಿದೆ.