Thursday, January 23, 2025
ಸುದ್ದಿ

ಉಪ್ಪಿನಂಗಡಿ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಉಪ್ಪಿನಂಗಡಿ; ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಜಿಲ್ಲಾದ್ಯಂತ ನಡೆಸುತ್ತಿರುವ ರಕ್ತದಾನ ಶಿಬಿರದ 98ನೇ ಕ್ಯಾಂಪ್ ಎಸ್.ಎಸ್.ಎಫ್ ಉಪ್ಪಿನಂಗಡಿ ಸೆಕ್ಟರ್ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಆದಿತ್ಯವಾರ ಉಪ್ಪಿನಂಗಡಿ ಮಾದರಿ ಸರಕಾರಿ ಶಾಲಾ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್.ಎಸ್.ಎಫ್ ಉಪ್ಪಿನಂಗಡಿ ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಎಸ್.ವೈ.ಎಸ್ ಉಪ್ಪಿನಂಗಡಿ ಸೆಂಟರ್ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್ ಆಶೀರ್ವಚನ ನೀಡಿದರು. ಎಸ್.ಜೆ.ಎಮ್ ಉಪ್ಪಿನಂಗಡಿ ರೇಂಜ್ ಪ್ರಧಾನ ಕಾರ್ಯದರ್ಶಿ ರಝ್ಝಾಕ್ ಲತೀಫ್ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಎಂ.ಎಂ ಮಹ್ ರೂಫ್ ಆತೂರು ಪ್ರಾಸ್ತಾವಿಕ ಭಾಷಣ ಹಾಗೂ ಜಿಲ್ಲಾ ಎಸ್‍ಎಸ್‍ಎಫ್ ಕ್ಯಾಂಪಸ್ ಕಾರ್ಯದರ್ಶಿ ಅಲೀ ತುರ್ಕಳಿಕೆ ಸಂದೇಶ ಭಾಷಣ ಮಾಡಿದರು. ಶಿಬಿರದಲ್ಲಿ ಜಿಲ್ಲಾ ಎಸ್.ಎಸ್.ಎಫ್ ಅಧ್ಯಕ್ಷ ಸೆರ್ಕಳ ಇಬ್ರಾಹಿಂ ಸಖಾಫಿ, ಉಪ್ಪಿನಂಗಡಿ ಡಿವಿಷನ್ ಎಸ್ಸೆಸ್ಸೆಫ್ಪ್ ಅಧ್ಯಕ್ಷ ಮಸ್ ಊದ್ ಸಅದಿ, ಜಿಲ್ಲಾ ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್, ಆದಂ ಮದನಿ ಆತೂರು, ಇಸ್ಹಾಕ್ ಮದನಿ ಅಳಕೆ, ರಹ್ಮಾನ್ ಪದ್ಮುಂಜ, ಆಸಿಫ್ ನೂಜಿ, ಮುಸ್ತಫಾ ಯುಪಿ, ಹಕೀಂ ಕಳಂಜಿಬೈಲ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.

ದಾನಿಗಳಿಂದ ಸುಮಾರು 50 ಯುನಿಟ್‍ಗಿಂತಲೂ ಅಧಿಕ ರಕ್ತ ಸಂಗ್ರಹಣೆಯನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಕುದ್ಲೂರು ಸ್ವಾಗತಿಸಿ ಸೆಕ್ಟರ್ ಪ್ರ.ಕಾರ್ಯದರ್ಶಿ ಉನೈಸ್ ಅಹ್ಮದ್ ಕುಂತೂರು ವಂದಿಸಿದರು.