ನವದೆಹಲಿ: ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರೆ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೊಂಡ್ಯೊಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ವಸ್ತುಪ್ರದರ್ಶನ ಅಥವಾ ಉತ್ಪನ್ನ ಪ್ರೋತ್ಸಾಹಕ್ಕೆಂದು ಸರಕುಗಳನ್ನು ವಿದೇಶಗಳಿಗೆ ಕೊಂಡೊಯ್ಯುವುದರಿಂದ, ಅದನ್ನು ಜಿಎಸ್‍ಟಿ ಅಡಿ ಮಾರಾಟ ಎಂದು ಪರಿಗಣಿಸಲಾಗುತ್ತದೆ. ಆ ಹಂತದಲ್ಲಿ ಅದು ಮಾರಾಟಕ್ಕಿಟ್ಟ ವಸ್ತುವಾಗಿರುತ್ತದೆಯೇ ಹೊರತು ಅದರ ಖರೀದಿಯಾಗಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ ಹೇಳಿಕೆ ನೀಡಿದೆ.
ರತ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಾಗಿ ವಿದೇಶಗಳಿಗೆ ತೆಗೆದುಕೊಂಡು ಹೋಗಿ ವಾಪಸ್ ಆಮದು ಆಗುವಾಗ ಐಜಿಎಸ್‍ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಟನೆಗಳು ಹಣಕಾಸು ಸಚಿವಾಲಯವನ್ನು ಕೋರಿದ್ದವು.