ಚೆನೈ :ಬೆಂಗಳೂರಿನ ಎಚ್‍ಎಎಲ್ ನಿರ್ಮಿಸಿರುವ ದೋನಿಯರ್ ಪಹರೆ ಮತ್ತು ಕಣ್ಗಾವಲು ಯುದ್ಧ ವಿಮಾನವನ್ನು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರ್ಮವೀರ್ ಸಿಂಗ್ ರಕ್ಷಣಾ ಸೇವೆಗೆ ಸಮರ್ಪಿಸಿದರು.
ಚೆನೈ ಸಾಗರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾ ಪಡೆಯ ಈ ವಿಶೇಷ ಪಹರೆ ವಿಮಾನವನ್ನು ಅವರು ವಿಧ್ಯುಕ್ತವಾಗಿ ಸೇವೆಗೆ ಚಾಲನೆ ನೀಡಿದರು.
ಶ್ರೀಲಂಕಾ ಮತ್ತು ದೇಶದ ಪೂರ್ವ ಭಾಗದ ಸಾಗರ ಮಾರ್ಗದಿಂದ ಭಾರತಕ್ಕೆ ನುಸುಳಬಹುದಾದ ವೈರಿಗಳು ಮತ್ತು ಉಗ್ರಗಾಮಿಗಳ ಮೇಲೆ ದೋನಿಯರ್ ಪಹರೆ ವಿಮಾನ ಹದ್ದಿನಕಣ್ಣು ಇಡಲಿದೆ.
ನೌಕಾ ಪಡೆಯ ನೌಕಾ ನೆಲೆಯಲ್ಲಿ ಸದಾ ರಕ್ಷಣಾ ಸೇವೆಗೆ ಸನ್ನದ್ಧವಾಗಿರುವ ಈ ವಿಮಾನದಲ್ಲಿ ಶತ್ರುಗಳ ಮಾಹಿತಿ ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನಗಳ ಸಾಧನಗಳನ್ನು ಅಳವಡಿಸಲಾಗಿದೆ. ಇದು ದೇಶದಲ್ಲಿರುವ 5ನೇ ದೋನಿಯರ್ ಏರ್‌ಕ್ರಾಫ್ಟ್ ಸ್ಕ್ವಾರ್ಡನ್ ದಳವಾಗಿದೆ.