Wednesday, January 22, 2025
ಸುದ್ದಿ

ಕರಾವಳಿಯಲ್ಲಿ ಹೆಚ್ಚಿದ ವರುಣನ ಆರ್ಭಟ – ಕಹಳೆ ನ್ಯೂಸ್

ಕಾರವಾರ: ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆ, ಗಾಳಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ಭಾನುವಾರದಿಂದ ಎಡಬಿಡದೆ ಭಾರೀ ಮಳೆಯಾಗುತ್ತಿದ್ದು ಸೋಮವಾರವೂ ಕೂಡ ಮಳೆಯ ಆರ್ಭಟ ಹೆಚ್ಚಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಜಾಗೃತೆಯ ದೃಷ್ಟಿಯಿಂದ ಹವಾಮಾನ ಇಲಾಖೆಯು ಕರ್ನಾಟಕದ ಕರಾವಳಿ ಭಾಗದಲ್ಲಿ ಜುಲೈ 24ರ ವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಸಮುದ್ರದಲ್ಲಿ 3.5ರಿಂದ 4.5 ಮೀಟರ್ ನಷ್ಟು ಭಾರೀ ಗಾತ್ರದ ಅಲೆಗಳು ಉಂಟಾಗುತ್ತಿದೆ. ಇದರಿಂದ ಸಮುದ್ರಕ್ಕೆ ಮೀನುಗಾರರು ಮೀನುಗಾರಿಕೆಗೆ ಹೊಗದಂತೆ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಶ್ಚಿಮ ದಿಕ್ಕಿನಿಂದ ಗಂಟೆಗೆ ಸುಮಾರು 40 ರಿಂದ 50 ಕಿ.ಮೀ.ರಷ್ಟು ವೇಗದಲ್ಲಿ ಭಾರೀ ಗಾಳಿ ಬಿಸುತ್ತಿದೆ. ಸಮುದ್ರದ ವಾತಾವರಣ ತೀರಾ ಕಠಿಣವಾಗಿದೆ. ಯಾವುದೇ ಕಾರಣಕ್ಕೂ ಕೂಡ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಿದ್ದಾರೆ. ತೀರಕ್ಕೆ ಭಾರೀ ಅಲೆಗಳು ಅಪ್ಪಳಿಸುತ್ತಿದ್ದು, ಕರಾವಳಿಯಲ್ಲಿ ಕಡಲು ಕೊರೆತಗಳು ಸೇರಿದಂತೆ ಹಾನಿಯಾಗುವ ಆತಂಕ ಎದುರಾಗಿದೆ.

ಕರಾವಳಿಯಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ, ತಗ್ಗು ಪ್ರದೇಶ, ಜನವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ದಿನ ಪೂರ್ತಿ ರಭಸದ ಮಳೆಯಾಗಿದ್ದು ಮಳೆ ಮುಂದುವರಿಯುವ ಸಾಧ್ಯತೆಗಳಿದೆ ಎಂದು ತಿಳಿಸಿದ್ದಾರೆ.