Tuesday, January 21, 2025
ಸಿನಿಮಾ

ಕನ್ನಡ ಬರೋದಿಲ್ಲ ಅಂದ ರಶ್ಮಿಕಾಗೆ ಅಭಿಮಾನಿಗಳು ಮಾಡಿದ್ದೇನು..? – ಕಹಳೆ ನ್ಯೂಸ್

ರಶ್ಮಿಕಾ ಮಂದಣ್ಣ ಹುಟ್ಟಿದು ಕರುನಾಡಿನಲ್ಲಿ. ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಪದಾರ್ಪಣೆ ಮಾಡಿದ ಈ ಚೆಲುವೆಗೆ ಒಂದೇ ಒಂದು ಚಿತ್ರ ಸಖತ್ ಫೇಮ್-ನೇಮ್ ತಂದುಕೊಟ್ಟಿತು. ತದನಂತರ ಈಕೆ ಕನ್ನಡದ ನಟದಿಗ್ಗಜರೊಂದಿಗೆ ನಟಿಸಿ ಟಾಪ್ ನಟಿಗಳ ಪಟ್ಟಿಗೆ ಸೇರಿಕೊಂಡರು. ಹೀಗೆ ಇರುವಾಗಲೇ ಬೇರೆ ಭಾಷೆಗಳಿಂದ ಈಕೆಗೆ ಅವಕಾಶಗಳು ಕೂಡಿಬಂದವು. ತಮಿಳು, ತೆಲುಗಿನಲ್ಲಿ ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಬಹುಭಾಷಾ ನಟಿಯಾಗಿ ಮಿಂಚಿದವರು ರಶ್ಮಿಕಾ ಮಂದಣ್ಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದಾ ಸುದ್ದಿಯಲ್ಲೇ ಇರುವ ಈ ಬೆಡಗಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್ ಸಲುವಾಗಿ ಸುತ್ತುತ್ತಿರೋ ರಶ್ಮಿಕಾ ಮಂದಣ್ಣ ಅವರ ಆ ಒಂದು ಹೇಳಿಕೆ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್‍ಗಾಗಿ ತಮಿಳುನಾಡಿನಲ್ಲಿ ಸಂದರ್ಶನ ನೀಡುತ್ತಿದ್ದ ವೇಳೆ, ಸಂದರ್ಶಕ ನಿಮಗೆ ಕನ್ನಡ ಮಾತನಾಡಲು ಸುಲಭ ಅಲ್ಲವೇ ಅಂತ ಕೇಳಿದಾಗ ರಶ್ಮಿಕಾ ಮಂದಣ್ಣ ಇಲ್ಲ `ಕನ್ನಡ ತುಂಬಾ ಕಷ್ಟ’ ಸರಿಯಾಗಿ ಮಾತನಾಡಲು ಬರೋಲ್ಲ ಅಂತ ನನಗೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ ಅಂತ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ವರ್ಷದಲ್ಲೇ ತಮಿಳು ತೆಲುಗಿನಲ್ಲಿ ಮಾತನಾಡೋ ರಶ್ಮಿಕಾ, ಕರ್ನಾಟಕದಲ್ಲಿ ಹುಟ್ಟಿ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲವ ಅಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಶ್ಮಿಕಾ ತಮಿಳು ಮತ್ತು ತೆಲುಗು ಜನರ ಮುಂದೆ ಅವರ ಭಾಷೆಯಲ್ಲಿಯೇ ಮಾತನಾಡುತ್ತಾರೆ.

ಕನ್ನಡದಲ್ಲಿ ಮಾತನಾಡುವಾಗ ಮಾತ್ರ ಅತೀ ಹೆಚ್ಚು ಇಂಗ್ಲೀಷ್ ಪದ ಬಳಸುತ್ತಾರೆ ಅನ್ನೋ ಆರೋಪವು ರಶ್ಮಿಕಾ ಮೇಲೆ ಈಗಾಗಲೇ ಇದೆ. ಇದರ ನಡುವೆ ಈಗ ನನಗೆ ಕನ್ನಡ ಮಾತನಾಡಲು ಸರಿಯಾಗಿ ಬರೋಲ್ಲ ಅಂತ ಹೇಳಿರೋದು ಈಗ ಅಭಿಮಾನಿಗಳಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ.

ಒಟ್ಟಿನಲ್ಲಿ ಕನ್ನಡ ಚಿತ್ರಾಭಿಮಾನಿಗಳು ರಶ್ಮಿಕಾ ಅಂದ್ರೆ ಕೆಂಡಕಾರುತ್ತಿರುವ ನಡುವೆ ರಶ್ಮಿಕಾ ಅವರ ಈ ಒಂದು ಹೇಳಿಕೆ ಈಗ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹಾಗೇ ರಶ್ಮಿಕಾಳನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದ ಅಭಿಮಾನಿಗಳು ಕೋಪಗೊಂಡಿದ್ದು, ಕಿರಿಕ್ ಬೆಡಗಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.