Breaking News : ಪುತ್ತೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ರಫೀಕ್ ಅಲಿಯಾಸ್ ಗುಜುರಿ ಮುನ್ನಾನನ್ನು ಸಾಕ್ಷಿ ಸಹಿತ ಹೆಡೆಮುರಿಕಟ್ಟಿದ ದಕ್ಷ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ – ಕಹಳೆ ನ್ಯೂಸ್
ಪುತ್ತೂರು : ಅಕ್ರಮ ಗಾಂಜ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪುತ್ತೂರು ಪೋಲೀಸರು. ದಿನಾಂಕ 23.07.2019 ರಂದು ಸಂಜೆ4.30ರ ಹೊತ್ತಿಗೆ ಖಚಿತ ಮಾಹಿತಿ ಮೇಲೆ ಸ್ಥಳಕ್ಕೆ ಬಂದ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮತ್ತು ತಂಡ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಅಜೇಯ ನಗರ ಮುರ ವಠಾರದಲ್ಲಿ ಒಬ್ಬ ವ್ಯಕ್ತಿಯು ಸ್ಕೂಟರ್ ಒಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿ ಬಂಧಿಸಿದ್ದಾರೆ. ಅಲ್ಲದೆ ಈ ಸಂದರ್ಬದಲ್ಲಿ ಪತ್ರಾಂಕಿತ ಅಧಿಕಾರಿ, ಪೊಲೀಸರು ಹಾಗೂ ಪಂಚಾಯತುದಾರರ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ರೈಲ್ವೇ ಓವರ್ ಬ್ರಿಡ್ಜ್ ಹತ್ತಿರ ಕೆದಿಲ ಗೌಡ ಸಮಾಜ ಹಾಲ್ ನ ಎದುರು ಸಾರ್ವಜನಿಕ ಸ್ಥಳದಲ್ಲಿ ಧಾಳಿ ನಡೆಸಿದ ಪೋಲೀಸರಿಗೆ ಆರೋಪಿ ಮಹಮ್ಮದ್ ರಫೀಕ್ ಯಾನೆ ಮುನ್ನಾ (39) ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಸ್ಕೂಟರ್ ಒಂದರಲ್ಲಿ ಕುಳಿತು ಗಾಂಜಾ ಮಾರಾಟದಲ್ಲಿ ತೊಡಗಿದ್ದು, ಆರೋಪಿ ವಶವಿದ್ದ 5,000/- ರೂ ಮೌಲ್ಯದ 150 ಗ್ರಾಂ ತೂಕದ 29 ಗಾಂಜಾ ಪ್ಯಾಕೇಟ್ ಗಳನ್ನು ಮಾರಾಟದಲ್ಲಿ ದೊರೆತ ನಗದು 650/- ರೂ, 3 ಮೊಬೈಲ್ ಫೋನ್ ಗಳನ್ನು, ಕೆಎ 21 ವೈ 8653 ನೇ ನಂಬ್ರದ ಹೋಂಡಾ ಅ್ಯಕ್ಟೀವಾ ಸ್ಕೂಟರ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯು ದಿವಂಗತ ಅಬ್ದುಲ್ ಖಾದರ್ ಪುತ್ರ ಮಹಮ್ಮದ್ ರಫೀಕ್ @ ಗುಜಿರಿ ಮುನ್ನ (39) ಗುರುತಿಸಲಾಗಿದ್ದು, ಆರೋಪಿಯ ವಿರುದ್ಧ ಅ.ಕ್ರ. ನಂಬ್ರ: 74/2019 ಕಲಂ: 8 (C ) 20 (b) (ii) (A) NDPS Act 1985 ಪ್ರಕರಣ ದಾಖಲಿಸಲಾಗಿದೆ.