Wednesday, January 22, 2025
ಸುದ್ದಿ

ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ : ಮೃತಹೇಹದ ಚಹರೆ ಬಗ್ಗೆ ಮಾಹಿತಿ : ಕಹಳೆ ನ್ಯೂಸ್

ಮಂಗಳೂರು : ಪಂಪುವೆಲ್ ಬಳಿಯ ದೀಪಕ್ ಎಲೆಕ್ಟ್ರಾನಿಕ್ ಅಂಗಡಿಯ ಜಗಲಿಯಲ್ಲಿ, ಒರ್ವ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟಿದ್ದ. ಇದೀಗ ಆತನ ಚಹರೆ ವಿವರವನ್ನ ಪೊಲೀಸರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರ ವಯಸ್ಸು 35 ರಿಂದ 40 ಎಂದು ಅಂದಾಜಿಸಲಾಗಿದೆ. ಬಿಳಿ ಮೈಬಣ್ಣ ಹೊಂದಿದ್ದು, 5.5 ಅಡಿ ಎತ್ತರ ಅಂದಾಜಿಲಾಗಿದೆ. ಇನ್ನು ಮೃತ ವ್ಯಕ್ತಿಯು ಬೂದು ಬಣ್ಣದ ರೌಂಡ್ ಕಾಲರಿನ, ತುಂಬು ತೋಳಿನ ಟಿ ಶರ್ಟ್, ಶರ್ಟಿನ ತೋಳು ಕಪ್ಪು ಬಣ್ಣದ್ದಾಗಿರುತ್ತದೆ. ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಕೇಸರಿ ಸೈಡ್ ಪಟ್ಟಿ ಇರುತ್ತದೆ. ಮೃತನ ಎಡ ಕೈ ಮುಂಗೈಯಲ್ಲಿ ನಾಗನ ಚಿತ್ರವಿರುವ ಹಚ್ಚೆ, ಇಂಗ್ಲಿಷ್‍ನಲ್ಲಿ ಆಟಿನ್ ಚಿಹ್ನೆಯ ಒಳಗಡೆ ಇಂಗ್ಲಿಷ್ ಅಕ್ಷರದಲ್ಲಿ V.P ಎಂದು ಬರೆದಿದೆ. ಅಲ್ಲದೆ ಎದೆಯ ಎಡ ಭಾಗದಲ್ಲಿ ಪುಟ್ಟಿ ಎಂದು ಬರೆದಿರುವ ಹಚ್ಚೆ ಇರುತ್ತದೆ. ಕಿವಿಯಲ್ಲಿ ಒಂದು ಟಿಕ್ಕಿ ಇರುತ್ತದೆ. ಮೃತಹೇಹವನ್ನು ವೆನ್ಲಾಕ್ ಶವಗಾರದಲ್ಲಿ ಇರಿಸಲಾಗಿದೆ. ಈ ಚಹರೆಯನ್ನು ಹೋಲುವ ವ್ಯಕ್ತಿಯ ಬಗ್ಗೆ ಮಾಹಿತಿ ಇದಲ್ಲಿ ಕಂಕನಾಡಿ ನಗರ ಠಾಣೆಗೆ ಅಥವಾ ಕಂಟ್ರೋಲ್ ರೂಮ್ (0824-222800) ಕರೆ ಮಾಡಿ ತಿಳಿಸಲು ಕೋರಿದೆ
ಕಂಕನಾಡಿ ನಗರ ಠಾಣೆ ಸಂಖ್ಯೆ – 9480805354, 0824-2220529
ಕಂಟ್ರೋಲ್ ರೂಮ್ ಸಂಖ್ಯೆ – 0824-222800

ಜಾಹೀರಾತು
ಜಾಹೀರಾತು
ಜಾಹೀರಾತು