Wednesday, January 22, 2025
ಸುದ್ದಿ

6 ಜನ ಯುವಕರಿಂದ ಬಾಲಕಿಯ ಅತ್ಯಾಚಾರ : ಆರೋಪಿಗಳ ಬಂಧನ – ಕಹಳೆ ನ್ಯೂಸ್

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ 6 ಜನ ಯುವಕರು ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಜುಲೈ 17 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಅಪ್ರಾಪ್ತೆ ವಯಸ್ಸಿನ ಮಗಳು ಅಪಹರಣವಾಗಿರುವ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ್ದರು. ಈ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣವಾದ ಬಾಲಕಿ ದಿನಾಂಕ ಜುಲೈ 23 ರಂದು ಪತ್ತೆಯಾಗಿದ್ದಾಳೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಇದು ಗುಂಪು ಅತ್ಯಾಚಾರವಲ್ಲ, ಅಪ್ರಾಪ್ತೆ ಬಾಲಕಿಯ ದೂರವಾಣಿ ಸಂಖ್ಯೆಯನ್ನು ಒಬ್ಬರಿಗೊಬ್ಬರು ನೀಡಿ, ದೂರವಾಣಿ ಸಂಖ್ಯೆಯ ಮೂಲಕ ಅಪ್ರಾಪ್ತೆ ಬಾಲಕಿಯನ್ನು ಸಂಪರ್ಕ ಮಾಡಿ, ಬೇರೆ ಬೇರೆ ದಿನಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ. ಚಂದ್ರಾಕ್ಷ(25), ಸಂದೀಪ್ ಕುಮಾರ್ (23), ಹಷೇಂದ್ರ ಯಾನೆ ರವಿ (24), ಲವಕುಮಾರ್(27), ಲಕ್ಷೀಶ ಯಾನೆ ಚರಣ್ (24), ಮಿಥನ್ ಅತ್ಯಾಚಾರವೆಸಗಿದ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಾಕ್ಷ

ಸಂದೀಪ್ ಕುಮಾರ್

ಲವಕುಮಾರ್

ಲಕ್ಷೀಶ ಯಾನೆ ಚರಣ್

ಹಷೇಂದ್ರ ಯಾನೆ ರವಿ