Thursday, January 23, 2025
ಸುದ್ದಿ

ಬಸ್‍ನಲ್ಲಿ ಹೃದಯಾಘಾತಗೊಂಡು ಸಾವು : ಮೃತರ ಬಗ್ಗೆ ಪೊಲೀಸರಿಂದ ತನಿಖೆ – ಕಹಳೆ ನ್ಯೂಸ್

ಬಂಟ್ವಾಳ : ಬಸ್‍ನಲ್ಲಿ ಹೃದಯಾಘಾತಗೊಂಡು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಬಿ.ಸಿ ರೋಡಿನಲ್ಲಿ ನಡೆದಿದೆ. ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‍ನಲ್ಲಿ, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ತನಿಖೆಯ ವೇಳೆ ಅಧಾರ್ ಕಾರ್ಡ್‍ನಲ್ಲಿ ವಿಳಾಸ ದೊರೆತ್ತಿದ್ದು, ಮೃತರನ್ನ ಬೆಳಗಾಂನ ಅಥಣಿಯ ಮಂಜುನಾಥ್ ಭಟ್ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾಹಿತಿ ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರಿನಿಂದ ಒಬ್ಬರೇ ಬಸ್‍ಗೆ ಹತ್ತಿದ್ದು, ಬಸ್ ಸೀಟ್‍ನಲ್ಲಿ ಕುಳಿತುಕೊಂಡು ಕಿವಿಗೆ ಇಯರ್ ಪೋನ್ ಹಾಕಿಕೊಂಡಿದ್ದು, ಪಾಣೆಮಂಗಳೂರುವರೆಗೂ ಮಾತನಾಡಿಕೊಂಡು ಬರುತ್ತಿದ್ದರು. ಇದ್ದಕ್ಕಿದ್ದಂತೆ ಇವರ ಮೊಬೈಲ್ ಕೆಳಗೆ ಬಿದ್ದಾಗ ಹತ್ತಿರದಲ್ಲಿದ್ದವರಿಗೆ, ಸಾವನ್ನಪ್ಪಿದ ಬಗ್ಗೆ ಸಂಶಯ ಬಂದು ಬಸ್ ನಿರ್ವಾಹಕನಿಗೆ ಸಹ ಪ್ರಯಾಣಿಕರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆ ಸಮೀಪ ಬಸ್ ನಿಲ್ಲಿಸಿದ್ದು, ಬಂಟ್ವಾಳ ನಗರ ಠಾಣಾ ಪೋಲೀಸರು ಬಸ್ ಬಳಿ ಬಂದು ವಿಚಾರಣೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಬಿ.ಸಿ ರೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.