Thursday, January 23, 2025
ಸುದ್ದಿ

ಮುಂದುವರೆದ ವರುಣನ ಆರ್ಭಟ; ಉಡುಪಿಯಲ್ಲಿ ಇಂದೂ ಶಾಲಾ ಕಾಲೇಜುಗಳಿಗೆ ರಜೆ – ಕಹಳೆ ನ್ಯೂಸ್

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಭೀತಿ ಮೂಡಿಸಿದೆ. ನಗರದ ರಾಜ ಕಾಲುವೆ ಆಗಿರುವ ಕಲ್ಸಂಕ ತೋಡು, ಸೋಮವಾರ ತಡರಾತ್ರಿಯೇ ಹಲವೆಡೆ ಉಕ್ಕಿ ಹರಿದ ಪರಿಣಾಮ, ಆಸುಪಾಸಿನ ಅನೇಕ ಮನೆಗಳು ಜಲಾವೃತವಾದವು.

ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಜು. 24ರಂದು ರಜೆ ಘೋಷಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡನಿಡಂಬೂರು, ಕಲ್ಸಂಕ ಗುಂಡಿಬೈಲು, ಬೈಲಕೆರೆಯಲ್ಲಿ ನೆರೆ ಸ್ಥಿತಿ ಉಂಟಾಗಿದೆ. ಬನ್ನಂಜೆ- ಮೂಡನಿಡಂಬೂರು – ನಿಟ್ಟೂರು ರಸ್ತೆ ಜಲಾವೃತವಾಗಿದ್ದು, ಸಂಚಾರ ನಿಷೇಧಿಸಲಾಗಿದೆ. ಇಲ್ಲಿ 8 ಮನೆಗಳ ಅಂಗಳಕ್ಕೆ, 4 ಮನೆಗಳ ಒಳಗೆ ನೀರು ನುಗ್ಗಿದೆ. ಬೈಲಕೆರೆಯಲ್ಲಿ 10ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ತಹಶೀಲ್ದಾರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು