Thursday, January 23, 2025
ಸುದ್ದಿ

ಫೇಸ್‍ಬುಕ್ ಲೈವ್ ಮಾಡಿ ಜಾಲಿ ರೈಡ್: ಸವಾರ ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ! – ಕಹಳೆ ನ್ಯೂಸ್

ಅಗರ್ತಲಾ: ಮಾಹಿತಿ ವಿನಿಮಯಕ್ಕಾಗಿ, ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುವುದಕ್ಕಾಗಿರುವ ಸಾಮಾಜಿಕ ಜಾಲತಾಣಗಳು ಜೀವವನ್ನೇ ಬಲಿತೆಗೆದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಸೋಮವಾರ ತ್ರಿಪುರಾದಲ್ಲಿ ನಡೆದ ದ್ವಿಚಕ್ರವಾಹನ ಸವಾರ ಫೇಸ್ ಬುಕ್ ಲೈವ್ ಸವಾರಿ ಮಾಡುವ ವೇಳೆ ಸಾವಿಗೀಡಾಗಿರುವುದು ಇಂತಹ ಸಾಹಸಕ್ಕೆ ಕೈ ಹಾಕುವವರಿಗೆ ಎಚ್ಚರಿಕೆಯ ಪಾಠವಾಗಬೇಕಿದೆ.

ದಕ್ಷಿಣ ತ್ರಿಪುರದ ಸಬ್ರೂಮ್‍ನ ಹರೀನಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ 25 ವರ್ಷದ ನಸಿರ್ಂಗ್ ವಿದ್ಯಾರ್ಥಿ ರಾಹುಲ್ ದಾಸ್ ಮೋಟಾರು ಬೈಕು ಓಡಿಸುವಾಗ ಫೇಸ್‍ಬುಕ್ ಲೈವ್ ಮಾಡುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಹುಲ್ ಹಿಂಬದಿಯಲ್ಲಿ ಕುಳಿತಿದ್ದ ಸುಮನ್ ದಾಸ್ (26) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರಾಹುಲ್ ಹಾಗೂ ಸುಮನ್ ದಾಸ್ ಅವರ ಜಾಲಿ ರೇಡ್, ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು