Friday, January 24, 2025
ಸುದ್ದಿ

ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ! –ಕಹಳೆ ನ್ಯೂಸ್

ಭೋಪಾಲ್: ಅಂಗನವಾಡಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟದ ಅಡಿಗೆ, ಶೌಚಾಲಯ ಕೋಣೆಯಲ್ಲಿ ತಯಾರಾಗುತ್ತದೆ. ಇದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರದಲ್ಲಿನ ದುಸ್ಥಿತಿ. ಆರೋಗ್ಯದ ಮಾನದಂಡಗಳನ್ನು ಸಂಪೂರ್ಣವಾಗಿ ಗಾಳಿ ತೂರಿರುವ ಅಧಿಕಾರಿಗಳು ಸ್ಥಳದ ಕೊರತೆ ನೆಪ ಹೇಳಿ ಶೌಚಾಲಯದ ಆವರಣದಲ್ಲೇ ಮಕ್ಕಳ ಬಿಸಿಯೂಟ ತಯಾರಿಸುತ್ತಿದ್ದಾರೆ.

ಕರೇರಾ ಎಂಬಲ್ಲಿನ ಅಂಗನವಾಡಿ ಮಕ್ಕಳಿಗೆ ಬಿಸಿಯೂಟಕ್ಕಾಗಿ ಆಹಾರ ತಯಾರಿಸಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದಾಗಿ ಅಲ್ಲಿನ ಶೌಚಾಲಯವನ್ನೇ ತಾತ್ಕಾಲಿಕ ಅಡಿಗೆ ಮನೆಯಾಗಿ ಬದಲಿಸಿಕೊಳ್ಳಲಾಗಿದೆ. ಇನ್ನೂ ಆಘಾತಕಾರಿ ಅಂಶವೆಂದರೆ ಶೌಚಾಲಯದ ನೀರು ಬಳಸಿ ಆಹಾರ ಬೇಯಿಸಲಾಗುತ್ತಿದ್ದು, ಇದೇ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಮಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶೌಚಾಲಯದ ಹೊರತು ಬೇರಾವ ಸ್ಥಳವಿಲ್ಲ” ಅಡಿಗೆ ತಯಾರಿಗಾಗಿ ಸ್ಥಳಾವಕಾಶದ ಕೊರತೆ ಇದೆ. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ನಾವು ಶೌಚಾಲಯದ ಒಂದು ಭಾಗವನ್ನೇ ಅಡಿಗೆ ಕೋಣೆಯಾಗಿ ಪರಿವರ್ತಿಸಿದ್ದೇವೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿ ರಾಜ್‍ಕುಮಾರಿ ಯೋಗಿ ಹೇಳುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು