Friday, January 24, 2025
ಸುದ್ದಿ

ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಶನ್ 17ನೇ ವಾರ್ಷಿಕ ಮಹಾಸಭೆ – ಕಹಳೆ ನ್ಯೂಸ್

ಬೆಳ್ತಂಗಡಿ : ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ 17ನೇ ವಾರ್ಷಿಕ ಮಹಾಸಭೆಯು ಗುರುವಾಯನಕೆರೆ ಛಾಯ ಭವನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಎಸ್‍ಕೆಪಿಎಯ ಜಿಲ್ಲಾದ್ಯಕ್ಷರಾದ ಶ್ರೀ ವಿಲ್ಸನ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಸಭಾಧ್ಯಕ್ಷರಾಗಿ ಎಸ್‍ಕೆಪಿಎಯ ಬೆಳ್ತಂಗಡಿಯ ವಲಯಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ ತಮ್ಮ 2 ವರ್ಷದ ಅವಧಿಯಲ್ಲಿ ನಡೆದ ಅಬಿವೃಧಿಯ ಬಗ್ಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಅಧ್ಯಕ್ಷರಾಗಿ ಸುರೇಶ್ ಕೊಡಂಗೆ ಆಯ್ಕಯಾದರು. ಕಾರ್ಯದರ್ಶಿಯಾಗಿ ಗಂಗಾದರ್ ಕುಲಾಲ್ ಹಾಗೂ ಕೋಶಧಿಕಾರಿಯಾಗಿ ಪ್ರಭಾಕರ್ ಕಕ್ಕಿಂಜೆ , ಗೌರವಧ್ಯಕ್ಷರಾಗಿ ಗೋಪಾಲ್ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ವಿಠಲ್ ಚೌಟ, ದಯಾನಂದ ಬಂಟ್ವಾಲ್ ಹಾಗೂ ಸುಂದರ್ ರವಿ ನಾರವಿ, ಉಮೇಶ್ ಮದಡ್ಕ, ಮಹಾವೀರ್ ಉಪಸ್ಥತರಿದ್ದರು.