ತ್ರಿಬಲ್ ರೈಡಿಂಗ್ – ಪೊಲೀಸರು ಎಲ್ಲಿ ಎಂದ ಆರ್ಜಿವಿ : ಇಲ್ಲೇ ಇದ್ದೇವೆ ಎಂದು ದಂಡ ಹಾಕಿದ ಪೊಲೀಸರು! – ಕಹಳೆ ನ್ಯೂಸ್
ಹೈದರಾಬಾದ್: ವಿವಾದಿತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡಿ ಪೊಲೀಸರು ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಿರುವ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಇಲ್ಲೇ ಇದ್ದೇವೆ ಎಂದು ಆರ್ಜಿವಿ ಗೆ 1,330 ರೂ ದಂಡ ಹಾಕಿದ್ದಾರೆ.
ಹೈದರಾಬಾದ್ನ ಮೂಸಾಪೇಟ್ನಲ್ಲಿರುವ ಶ್ರೀರಾಮುಲು ಥಿಯೇಟರ್ ಗೆ ಬೈಕ್ನಲ್ಲಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ತೆರಳಿದ ಆರ್ಜಿವಿ ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆರ್ಜಿವಿ ಅವರ ಟ್ವೀಟ್ ವಿಡಿಯೋವನ್ನು ಗಮನಿಸಿ ಬೈಕ್ ನಂಬರ್ ಗೆ ದಂಡದ ಚಲನ್ ನೀಡಿದ್ದಾರೆ. ಆರ್ಜಿವಿ ಸೇರಿದಂತೆ ಬೈಕ್ ನೋಂದಣಿ ವಿಳಾಸಕ್ಕೆ ದಂಡದ ಚಲನ್ ಕಳುಹಿಸಿಕೊಟ್ಟಿದ್ದಾರೆ.
ಇನ್ನು ಆರ್ಜಿವಿ ಅವರ ಈ ವರ್ತನೆ ಕುರಿತು ಕಿಡಿಕಾರಿರುವ ತೆಲುಗು ಚಿತ್ರರಂಗದ ಗಣ್ಯರು ಇದು ಕೇವಲ ಪ್ರಚಾರದ ಗಿಮಿಕ್ ಎಂದು ಕಿಡಿಕಾರಿದ್ದಾರೆ.