ಮಂಗಳೂರು: ಮಂಗಳೂರಿನ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಾಬರೇಶನ್ ಫಾರ್ ಎಂಜಿನಿಯರಿಂಗ್ ಎಜ್ಯುಕೇಶನ್ ಸಹಭಾಗಿತ್ವದಲ್ಲಿ ‘ಸಂಜೋಶ್’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ.
ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿರುವ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಾಬರೇಶನ್ ಫಾರ್ ಎಂಜಿನಿಯರಿಂಗ್ ಎಜ್ಯುಕೇಶನ್ ಸಹಭಾಗಿತ್ವದಲ್ಲಿ ‘ಸಂಜೋಶ್’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ ಆರಂಭವಾಗಿದೆ.
ಈ ಕುರಿತು ಐಯುಸಿಇಇ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೃಷ್ಣ ವೆದುಲಾ ಮಾತನಾಡಿ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧನೆ ಮಾಡುವ ಉಪನ್ಯಾಸಕರು ಪರಿಣಾಮಕಾರಿ ಬೋಧನಾ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಈ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.
ಇದು ಅಂತಾರಾಷ್ಟ್ರೀಯ ಗುಣ ಮಟ್ಟದ ಶಿಕ್ಷಣ ತರಬೇತಿ ಆಗಿದ್ದು, ತರಬೇತಿಯನ್ನು ಪೂರ್ತಿಗೊಳಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತರಬೇತಿಯು ಫೇಸ್ ಟು ಫೇಸ್ ಸೆಶನ್‍ಗಳು, ಆನ್‍ಲೈನ್ ಮೋಡ್ಯುಲ್‍ಗಳನ್ನು ಒಳಗೊಂಡಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರಿಯೋ ಡಿ’ಸೋಜಾ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ, ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಯ ರಾಕೇಶ್ ಲೋಬೊ, ಮಾಧ್ಯಮ ಸಲಹೆಗಾರ ಇ.ಫೆನಾರ್ಂಡಿಸ್ ಉಪಸ್ಥಿತರಿದ್ದರು.