ಹಾಸನ: ಕಡಿಮೆ ವೇತನ ನೀಡುತ್ತಿರುವುದಾಗಿ ಆರೋಪಿಸಿ ಗಾರ್ಮೆಂಟ್ಸ್ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ ಘಟನೆ ಹಾಸನದಲ್ಲಿ ಬುಧವಾರ ನಡೆದಿದೆ. ಪ್ರತಿಭಟನಾ ನಿರತ ನೌಕರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಹಾಸನದ ಹಿಮತ್ ಸಿಂಕಾ ಗಾರ್ಮೆಂಟ್ಸ್ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿಚಾರ್ಜ್ ನಡೆಸಿದ್ದು, ಇದರಿಂದ ಹಲವು ನೌಕರರು ಗಾಯಗೊಂಡಿದ್ದಾರೆ.
ತಮಗೆ ಕೊಡಬೇಕಾಗಿರುವ ಬಾಕಿ ಹಣ ಪಾವತಿ ಮಾಡುವಂತೆ ನೌಕರರು ಒತ್ತಾಯಿಸಿದ್ದು, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಎಲ್ಲಾ ಬೇರೆ ರಾಜ್ಯಗಳ ಜನರೇ ತುಂಬಿಕೊಂಡಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.