Wednesday, January 22, 2025
ಸುದ್ದಿ

ಕತಾರ್‌ನಲ್ಲಿ ಸಿಡಿದ ಕಂಪ್ರೆಶರ್: ದ.ಕ.ಮೂಲದ ಸಂದೇಶ್ ಸಾವು – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಮೂಲದ ಯುವಕ ಸಂದೇಶ್ ಶೆಟ್ಟಿ ಕತಾರ್‌ನಲ್ಲಿ ಕಂಪ್ರೆಶರ್ ಸಿಡಿದು ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಪುಂಜಾಲಕಟ್ಟೆ ಸಮೀಪದ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ, ಪುರಿಯ ನಿವಾಸಿ ಗಣೇಶ್ ಶೆಟ್ಟಿ – ವಾರಿಜಾ ಶೆಟ್ಟಿ ದಂಪತಿ ಕೊನೆಯ ಪುತ್ರ ಸಂದೇಶ್. ಉದ್ಯೋಗ ನಿಮಿತ್ತ ಕತಾರ್ ನಲ್ಲಿದ್ದರು. ಜುಲೈ 23ರಂದು ನಡೆದ ದುರ್ಘಟನೆಯಲ್ಲಿ ಸಂದೇಶ್ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಸಂದೇಶ್ ಎಸಿ ಮೆಕ್ಯಾನಿಕ್ ಆಗಿದ್ದು, ಕತಾರ್ ಸ್ಟೇಡಿಯಂನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಕಂಪ್ರೆಶರ್ ಸಿಡಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂದೇಶ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರ ಪತ್ನಿ 20 ದಿನಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು