Recent Posts

Tuesday, January 21, 2025
ಸುದ್ದಿ

ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರ, ತಗ್ಗುಪ್ರದೇಶ ಜಲಾವೃತ- ಕಹಳೆ ನ್ಯೂಸ್

ಮುಂಬೈ: ವಾಣಿಜ್ಯ ಮಹಾನಗರಿ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ನಗರದ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಲೋಕಲ್ ರೈಲು ಸಂಚಾರ ವಿಳಂಬವಾಗಿದ್ದು ಕಚೇರಿ, ಶಾಲಾ, ಕಾಲೇಜಿಗೆ ತೆರಳುವವರು ಪರದಾಡುವಂತಾಗಿದೆ. ದಾದರ್, ವಾಡ್ಲಾ, ಕುರ್ಲಾ, ಸೈಯನ್, ತಿಲಕ್ ನಗರ, ಅಂಧೇರಿ, ಸಾಂತಕ್ರೂಝ್, ಗೋರೆಗಾಂವ್, ಮಾಲ್ಡಾ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆ 7ಗಂಟೆವರೆಗೆ ದಾಖಲೆಯ 171.0 ಮಿಲಿ ಮೀಟರ್ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು