Tuesday, January 21, 2025
ರಾಜಕೀಯ

ಮೈತ್ರಿ ಸರ್ಕಾರ ಪತನವಾದರೂ, ಯಡಿಯೂರಪ್ಪಗೆ ತಪ್ಪಿಲ್ಲ ಟೆನ್ಷನ್ – ಕಹಳೆ ನ್ಯೂಸ್

ಮೂರು ವಾರಗಳಿಂದ ನಡೆಯುತ್ತಿದ್ದ ರಾಜ್ಯ ರಾಜಕೀಯ ವಿದ್ಯಮಾನಗಳಿಗೆ ನಿನ್ನೆ ತೆರೆಬಿದ್ದಿದೆ. ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ್ದ ಸಿಎಂ ಕುಮಾರಸ್ವಾಮಿ ನಿನ್ನೆಯ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಇನ್ನೊಂದೆಡೆ, ಅತೃಪ್ತ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಕಾಂಗ್ರೆಸ್ ನಾಯಕರು ಸ್ಪೀಕರ್ ರಮೇಶ್ ಕುಮಾರ್ ಬಳಿ ಮನವಿ ಮಾಡಿದ್ದಾರೆ. ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ಕೂಡ ಸದ್ಯದ ಕುತೂಹಲಗಳಲ್ಲಿ ಒಂದು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನಸಭೆ ಸದಸ್ಯ ಬಲ 224, ಮ್ಯಾಜಿಕ್ ನಂಬರ್ 113, ರಾಜೀನಾಮೆ ಅಂಗೀಕಾರವಾಗದ ಕಾರಣ ಸದಸ್ಯ ಬಲ 225 ಮತ್ತು ಮ್ಯಾಜಿಕ್ ನಂಬರ್ 113 ಇರಲಿದೆ. ಆದರೆ ಬಿಜೆಪಿ ಬಳಿ ಇರುವುದು ಈಗ 104+2+1 ಮಾತ್ರ, ಹಿಂದೆ ಇದೇ ಸಂಖ್ಯಾಬಲ ಇಟ್ಟುಕೊಂಡು ಯಡಿಯೂರಪ್ಪ ವಿಶ್ವಾಸಮತ ಸಾಬೀತು ಮಾಡಲು ಸಾಧ್ಯವಾಗಿರಲಿಲ್ಲ, ಈಗಲೂ ಅದೇ ಸಂಖ್ಯೆ ಇರುವ ಕಾರಣ ಸಮಸ್ಯೆ ಎದುರಾಗಬಹುದು ಎಂಬ ಲೆಕ್ಕಾಚಾರ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬೈನಲ್ಲಿರುವ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ಮ್ಯಾಜಿಕ್ ನಂಬರ್ ಡೌನ್ ಆಗುತ್ತದೆ. ಇಲ್ಲವಾದಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವುದು ಬಹಳ ಕಷ್ಟವಾಗಲಿದೆ. ಹೀಗಾಗಿ, ಮೈತ್ರಿ ಸರ್ಕಾರ ಪತನವಾದರೂ ಯಡಿಯೂರಪ್ಪಗೆ ತಲೆಬಿಸಿ ತಪ್ಪಿಲ್ಲ. ಹಾಗಾದರೆ ಯಡಿಯೂರಪ್ಪ ಅದು ಹೇಗೆ ವಿಶ್ವಾಸಮತ ಗಳಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.