Tuesday, January 21, 2025
ಸುದ್ದಿ

ಪ್ರಾಮಾಣಿಕತೆ ಮೆರೆದ ಗೃಹ ರಕ್ಷಕ ಶಿವ ಶೆಟ್ಟಿಗಾರ್ – ಕಹಳೆ ನ್ಯೂಸ್

ಬಂಟ್ವಾಳ: ಇಂದು ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಬಂಟ್ವಾಳ ಘಟಕದ ಗೃಹರಕ್ಷಕ ಶಿವಶೆಟ್ಟಿಗಾರ್ ಇವರನ್ನು ದ.ಕ ಜಿಲ್ಲಾ ಕಮಾಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಶೆಟ್ಟಿಗಾರ್ ಇವರು ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕರ್ತವ್ಯದಲ್ಲಿದ್ದಾಗ ಬಸ್ ನಿಲ್ದಾಣದ ಎದುರುಗಡೆ ರಸ್ತೆಯಲ್ಲಿ ಬಿದ್ದಿದ್ದ ಪರ್ಸಿನಲ್ಲಿ 50 ಸಾವಿರ ನಗದು ಹಾಗೂ ಒಂದು ಚಿನ್ನದ ನೆಕ್ಲೇಸ್ ಸರವಿದ್ದು, ಅದನ್ನು ವಾರಿಸುದಾರರಿಗೆ ಮುಟ್ಟಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಕರ್ತವ್ಯ ನಿಷ್ಠೆಯನ್ನು ಗುರತಿಸಿ ಸನ್ಮಾನ ಮಾಡಿದ ಕಮಾಡೆಂಟ್, ಇಂತಹ ಗೃಹರಕ್ಷಕರು ಇತರ ಗೃಹರಕ್ಷಕರಿಗೆ ಮಾದರಿ. ಇವರ ಕರ್ತವ್ಯ, ಉತ್ತಮ ನಿಷ್ಠೆಯನ್ನು ಗುರುತಿಸಿ, ಜಿಲ್ಲಾ ಕಮಾಡೆಂಟ್ ಕೇಂದ್ರ ಕಚೇರಿಗೆ ನಗದು ಬಹುಮಾನಕ್ಕಾಗಿ ಶಿಫಾರಸ್ಸು ಸಲ್ಲಿಸಿದರು. ಕೇಂದ್ರ ಕಚೇರಿಯಿಂದ ನಗದು ಪುರಸ್ಕಾರ ಘೋಷಣೆಯಾಗಿರುತ್ತದೆ ಎಂದು ಹೇಳಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಪರಿಸರ ಪ್ರೇಮಿ ಮಾಧವ ಉಲ್ಲಾಲ್ ಮಾತನಾಡಿ ಉಳಿದ ಗೃಹರಕ್ಷಕರು ಇಂತಹ ಕೆಲಸವನ್ನು ಮಾಡಿ ಇಲಾಖೆಯ ಗೌರವ ಹೆಚ್ಚಿಸಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೃಹರಕ್ಷಕರಾರ ಶಿವಶೆಟ್ಟಿಗಾರ್ ನನ್ನ ಕೆಲಸವನ್ನು ಗುರುತಿಸಿ ಕೇಂದ್ರ ಕಚೇರಿಗೆ ಶಿಫಾರಸ್ಸು ಸಲ್ಲಿಸಿದ ಜಿಲ್ಲೆಯ ಕಮಾಡೆಂಟ್ ಹಾಗೂ ಡೆಪ್ಯುಟಿ ಕಮಾಡೆಂಟ್ ರವರಿಗೆ ಧನ್ಯವಾದ ಸಲ್ಲಿಸಿದರು.

ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಂಡರ್ ರಮೇಶ್‍ರವರು ಮಾತನಾಡಿ, ಪ್ರಾಮಾಣಿಕತೆ ಮೆರೆದ ಶಿವಶೆಟ್ಟಿಗಾರ್ ಬಂಟ್ವಾಳ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವುದು ನಿಜಕ್ಕೂ ಶ್ಲಾಘನೀಯ. ಹಾಗೂ ಇದೇ ರೀತಿ ಎಲ್ಲಾ ಗೃಹರಕ್ಷಕರು ಪ್ರಮಾಣಿಕತೆ ಮೇರೆದು ಇಲಾಖೆಯ ಗೌರನ ಹೆಚ್ಚಿಸಿ ಎಂದು ನುಡಿದರು.

ಗೃಹರಕ್ಷಕರಾದ ಸನತ್ ಆಳ್ವಾ ಸ್ವಾಗತಿಸಿದರು. ಗೃಹರಕ್ಷಕರಾರ ರಮೇಶ್ ಬಂಡಾರಿ ವಂದಿಸಿ, ಶುಭ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಚೇರಿಯ ಅಧಿಕ್ಷಾರಾದ ರತ್ನಾಕರ್.ಎಂ., ಪ್ರಥಮ ದರ್ಜೆ ಸಹಾಯಕ ಅನಿತಾ .ಟಿ.ಎಸ್., ದಲಾಯತ್ ಮೀನಾಕ್ಷಿ, ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿ ಐತ್ತಪ್ಪರವರು ಉಪಸ್ಥಿತರಿದ್ದರು.