Monday, January 20, 2025
ಸುದ್ದಿ

ದೇಶಾದ್ಯಂತ ಭಾರೀ ಮಳೆಯ ಮುನ್ನೆಚ್ಚರಿಕೆ – ಕಹಳೆ ನ್ಯೂಸ್

ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರವನ್ನು ತತ್ತರಿಸುವಂತೆ ಮಾಡಿರುವ ಮಳೆರಾಯ, ಈಗಾಗಲೇ ಬಿಹಾರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮಳೆ ಬಂದು ಭಾರೀ ಹಾನಿಗೆ ಕಾರಣವಾಗಿದೆ. ಈ ಎರಡು ರಾಜ್ಯಗಳಲ್ಲೇ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಇದುವರೆಗೂ ಸುಮಾರು 170 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು