Monday, January 20, 2025
ಕ್ರೀಡೆ

ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ :ವಿರಾಟ್ ಕೊಹ್ಲಿ – ಕಹಳೆ ನ್ಯೂಸ್

India's captain Virat Kohli gestures while fielding during the 2019 Cricket World Cup group stage match between India and Pakistan at Old Trafford in Manchester, northwest England, on June 16, 2019. (Photo by Oli SCARFF / AFP) / RESTRICTED TO EDITORIAL USE
ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಬರಿಗೈಯಲ್ಲಿ ಹಿಂದಿರುಗಿದೆ. ಈ ಬಗ್ಗೆ ಚರ್ಚೆಗಳಾಗುತ್ತಿದ್ದು ಈ ನಡುವೆ ತಮ್ಮ ತಂಡದ ಯುವ ಆಟಗಾರರಿಗೆ ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿನ ವಾತಾವರಣವು ತುಂಬಾ ಸ್ನೇಹಪರವಾಗಿದೆ. ಅಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುಕ್ತ ಅವಕಾಶವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲಾ ಆಟಗಾರರನ್ನು ಸಮಾನ ಗೌರವದಿಂದ ಕಾಣಲಾಗುತ್ತದೆ. ಮೈದಾನದಲ್ಲಿ ಯುವ ಆಟಗಾರರು ಮಾಡುವ ತಪ್ಪುಗಳನ್ನು ಎತ್ತಿ ಆಡುವುದನ್ನು ವಿರೋಧಿಸುತ್ತಾರೆ ಎಂದರು.
ಜನರನ್ನು ಬೈಯುವ ಸಂಸ್ಕೃತಿ ಈಗ ಡ್ರೆಸ್ಸಿಂಗ್ ರೂಂನಲ್ಲಿ ಇಲ್ಲ. ನಾನು ಕುಲದೀಪ್ ಯಾದವ್ ಜೊತೆ ಎಷ್ಟು ಸ್ನೇಹಪೂರ್ವಕವಾಗಿರುತ್ತೋ ಅಷ್ಟೇ ಎಂಎಸ್ ಧೋನಿ ಜೊತೆ ಇರುತ್ತದೆ. ಇಲ್ಲಿ ಯಾರಿಗಾದರೂ ಏನು ಬೇಕಾದರೂ ಹೇಳುವ ವಾತಾವರಣವಿದೆ ಎಂದರು.

ಜಾಹೀರಾತು

ಜಾಹೀರಾತು
ಜಾಹೀರಾತು