Tuesday, January 21, 2025
ಸುದ್ದಿ

ಸಬರ್ಬನ್ ರೈಲು ಯೋಜನೆ: ಒಟ್ಟು 148 ಕಿ.ಮೀ ವ್ಯಾಪ್ತಿಗೆ ಕೇವಲ 57 ನಿಲ್ದಾಣಗಳು – ಕಹಳೆ ನ್ಯೂಸ್

ಬೆಂಗಳೂರು : ಉದ್ಯಾನ ನಗರಕ್ಕೆ ಸಬರ್ಬನ್ ರೈಲು ಯೋಜನೆ ಬಹಳ ಮಹತ್ವದ್ದು. ಇತ್ತೀಚೆಗೆ ನಗರ ಬೆಳೆಯುತ್ತಿದ್ದಂತೆ ಇದರ ಬೇಡಿಕೆ ಹೆಚ್ಚುತ್ತಿದೆ. ಇದೀಗ ಯೋಜನೆ ಕಾರ್ಯರೂಪಕ್ಕೆ ಬರುತಿದ್ದು, 57 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು ಒಟ್ಟು 16 ಸಾವಿರ ಕೋಟಿ ರೂ ವ್ಯಯಿಸಲಾಗುತ್ತಿದೆ. ಒಟ್ಟು 148 ಕಿ.ಮೀ ವ್ಯಾಪ್ತಿಯಲ್ಲಿ ರೈಲು ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ನವೆಂಬರ್‍ನಲ್ಲಿ ಸಲ್ಲಿಸಲಾಗಿದ್ದು 13 ಕಿ.ಮೀ ವ್ಯಾಪ್ತಿಗೆ ಇದೂ ಕೂಡ ಸೇರಿಕೊಳ್ಳುತ್ತದೆ.

ಉಪನಗರ ರೈಲು ಯೋಜನೆ:
ಸರ್ಕಾರದ ಷರತ್ತು ತಿರಸ್ಕರಿಸಿದ ರೈಲ್ವೆ ಮಂಡಳಿ 2018ರಲ್ಲಿಯೇ ರೈಲ್ ಇಂಡಿಯಾ ಟೆಕ್ನಾಲಜಿಕಲ್ ಅಂಡ್ ಎಕನಾಮಿಕ್ ಸರ್ವೀಸ್‍ಗೆ ಟೆಂಡರ್ ನೀಡಲಾಗಿದೆ. ಕಾಮಗಾರಿಯು 2025ಕ್ಕೆ ಪೂರ್ಣಗೊಳ್ಳಲಿದೆ. 148 ಕಿ.ಮೀ ವ್ಯಾಪ್ತಿಯಲ್ಲಿ 55.575 ಕಿ.ಮೀ ಎಲಿವೇಟೆಡ್ ಹಾಗೂ 92.595 ಕಿ.ಮೀ ಗ್ರೇಡ್ ಲೆವೆಲ್‍ನಲ್ಲಿ ನಿರ್ಮಿಸಲಾಗುತ್ತದೆ. ಮೊದಲು 86 ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಈಗ ಕೇವಲ 57 ನಿಲ್ದಾಣಗಳು ಮಾತ್ರ ಬರಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು ನಾಲ್ಕು ಕಾರಿಡಾರ್‌ಗಳನ್ನು ಇದು ಹೊಂದಿರುತ್ತದೆ
ಕ್ರಾಂತಿವೀರ ಸಂಗೊಲ್ಳಿ ರಾಯಣ್ಣ-ಯಶವಂತಪುರ-ಯಲಹಂಕ- ದೇವನಹಳ್ಳಿ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(41.4ಕಿ.ಮೀ) – ಬೈಯಪ್ಪನಹಳ್ಳಿ-ಬಾಣಸವಾಡಿ-ಲೊಟ್ಟಿಗೆಹಳ್ಳಿ-ವೈಟ್‍ಫೀಲ್ಡ್-ಯಶವಂತಪುರ(25.1 ಕಿ.ಮೀ) -ಕೆಂಗೇರಿ-ಕಂಟೋನ್ಮೆಂಟ್-ವೈಟ್‍ಫೀಲ್ಡ್(35.52 ಕಿ.ಮೀ) -ಹೆಲ್ಲಳಿಗೆ-ಬೈಯಪ್ಪನಹಳ್ಳಿ-ಚೆನ್ನಸಂದ್ರ-ಯಲಹಂಕ-ರಾಜಾನುಕುಂಟೆ(46.24ಕಿ.ಮೀ) ವ್ಯಾಪ್ತಿಯಲ್ಲಿ ಸಬರ್ಬನ್ ರೈಲು ಸಂಚರಿಸಲಿದೆ. ನೆಲಮಂಗಲದಿಂದ ಚಿಕ್ಕಬಾಣಾವರ ಮಾರ್ಗವನ್ನು ಕೈಬಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೆಂಗಳೂರಿನ ಮಧ್ಯಭಾಗದಲ್ಲಿರುವವರಿಗೆ ಸಹಾಯವಾಗಲಿದೆ. ಇದೇ ಉದ್ದೇಶದಿಂದ ಬಿಎಂಆರ್‌ಸಿಎಲ್ ಕೂಡ ಮೆಟ್ರೋ ಮಾರ್ಗವನ್ನು ಕೂಡ ನಿರ್ಮಿಸುತ್ತಿದೆ. ಶೀಘ್ರ ಒಂದು ಕಾರಿಡಾರ್ ನಿರ್ಮಾಣ ಪೂರ್ಣಗೊಳ್ಳುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

ಕೆಂಗೇರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಈ ಕಾರಿಡಾರ್‌ನ್ನು ಕೊನೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಮೊದಲು 18,133 ಕೋಟಿ ವೆಚ್ಚದಲ್ಲಿ ಸಬರ್ಬನ್ ರೈಲ್ವೆ ಯೋಜನೆ ನಿರ್ಮಾಣ ಮಾಡಲು ಹೊರಟಿತ್ತು. ಈಗ ಪರಿಷ್ಕರಿಸಲಾಗಿದ್ದು 16,035 ಕೋಟಿ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗಲಿದೆ.