Thursday, January 23, 2025
ಸುದ್ದಿ

ಹೆಚ್‍ಡಿಕೆ ರಾಜೀನಾಮೆ ಹಿನ್ನೆಲೆ – ತಾನು ಬೆಳೆದ ಸಿಲ್ವರ್ ಗಿಡಗಳನ್ನು ಕಡಿದು ಹಾಕಿ ಬೇಸರ ವ್ಯಕ್ತಪಡಿಸಿದ ರೈತ – ಕಹಳೆ ನ್ಯೂಸ್

ಮಂಡ್ಯ: ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ, ತಮ್ಮ ಒಂದು ಎಕ್ರೆಯಲ್ಲಿ ಬೆಳೆದಿದ್ದ ಸಿಲ್ವರ್ ಗಿಡಗಳನ್ನು ರೈತ ಕಡಿದು ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ರೈತನ ವಿಡಿಯೋವನ್ನು ಶೇರ್ ಮಾಡಲಾಗಿದೆ. ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ಬೆಳಗ್ಗೆ ಒಳಗಡೆ ಒಂದು ಎಕ್ರೆ ಬೆಳೆದಿರುವ ಸಿಲ್ವರ್ ಗಿಡ ಕಡಿದು ಹಾಕುವುದಾಗಿ ಚಾಲೆಂಜ್ ಮಾಡಿದ್ದರು. ಅಂತಹವರನ್ನೇ ಅಧಿಕಾರದಿಂದ ಇಳಿಸಿದಾಗ ದೇಶದಲ್ಲಿ ಇನ್ಯಾರು ಆಡಳಿತ ನಡೆಸುತ್ತಾರೆ. ಈಗ ನಾನು ಚಾಲೆಂಜ್ ಮಾಡಿರುವಂತೆ ಸಿಲ್ವರ್ ಗಿಡಗಳನ್ನು ಕಡಿದು ಹಾಕಿದ್ದೇನೆ ಎಂದು ರೈತ ಹೆಚ್‍ಡಿಕೆ ರಾಜೀನಾಮೆ ವಿಚಾರಕ್ಕೆ ಬೇಸರ ಹೊರಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಲ್ವರ್ ಗಿಡಗಳನ್ನು ಕಡಿದು ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ರೀತಿಯ ನಡೆಯಿಂದ ಕುಮಾರಸ್ವಾಮಿಯವರಿಗೆ ಮತ್ತಷ್ಟು ನೋವು ಕೊಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು