Thursday, January 23, 2025
ಸುದ್ದಿ

ಅದ್ಯಪಾಡಿ: ಗುಡ್ಡ ಕುಸಿತ ತಾತ್ಕಾಲಿಕ ಪರಿಹಾರ – ಕಹಳೆ ನ್ಯೂಸ್

ಬಜಪೆ: ಎರಡೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿ ಚರ್ಚ್ ಬಳಿ ಗುಡ್ಡದ ಮಣ್ಣು ಕುಸಿದಿದೆ. ತಾತ್ಕಾಲಿಕ ಪರಿಹಾರವಾಗಿ ಮರಳು ತುಂಬಿದ ಗೋಣಿಯನ್ನು ಇಡಲಾಗಿದೆ. ಆದರೂ ಗುಡ್ಡದ ಮಣ್ಣು ಕುಸಿಯುವ ಭೀತಿಯಿದೆ.

ಧಾರಾಕಾರ ಮಳೆಯಿಂದಾಗಿ ಅದ್ಯಪಾಡಿಯ ಲೋಕೋಪಯೋಗಿ ರಸ್ತೆಯಲ್ಲಿ ಗುಡ್ಡ ಮಣ್ಣು ಕುಸಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ರಸ್ತೆಗೆ ಬಿದ್ದ ಮಣ್ಣನ್ನು ಮಂಗಳವಾರ ಜೇಸಿಬಿಯಿಂದ ತೆಗೆಯಲಾಯಿತು. ಮಳೆಗೆ ಮಣ್ಣು ಇನ್ನೂ ಕುಸಿದಿದ್ದು ಬುಧವಾರ ಲೋಕೋಪಯೋಗಿ ಇಲಾಖೆಯಿಂದ ಗುಡ್ಡದ ಬುಡಕ್ಕೆ ಮರಳು ತುಂಬಿದ ಗೋಣಿ ಇಡಲಾಗಿದೆ. ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಡ್ಡದ ಕೆಳಗಿರುವ ಮನೆಗಳಿಗೆ ಅಪಾಯದ ಬಗ್ಗೆ ಸೂಚಿಸಲಾಗಿದೆ. ಮಳೆ ಹೆಚ್ಚಾದಂತೆ ಮಣ್ಣು ಕುಸಿಯುವ ಸಂಭವವಿದೆ. ಸ್ಥಳಕ್ಕೆ ತಹಶೀಲ್ದಾರ್ ಗುರು ಪ್ರಸಾದ್ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀರಿನ ಒರತೆ ಜಾಸ್ತಿಯಾಗಿದ್ದು, ಮಣ್ಣು ಕುಸಿತ ಕಂಡ ಪ್ರದೇಶದ ಕೆಳಗಡೆಯೂ ಕುಸಿಯಲು ಆರಂಭವಾಗಿದೆ. ತಾತ್ಕಾಲಿಕ ಪರಿಹಾರಕ್ಕೆ ಮರಳುತುಂಬಿದ ಗೋಣಿಯನ್ನು ಇಡಲಾಗಿದೆ. ಮಳೆ ಕಡಿಮೆಯಾದ ಅನಂತರ ಶಾಶ್ವತ ಪರಿಹಾರವಾಗಿ ತಡೆಗೋಡೆ ನಿರ್ಮಾಣಕ್ಕೆ ಸುಮಾರು 25ಲಕ್ಷ ರೂ. ಬೇಕಾಗುತ್ತದೆ ಎಂದು ಲೋಕಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಗೋಪಾಲ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು