ಬಂಟ್ವಾಳ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ ಯಾಗಿದೆ. ಸಂಜೆಯ ವೇಳೆಗೆ ನೇತ್ರಾವತಿ ನೀರಿನ ಮಟ್ಟ 5.1 ಮೀ ಮುಟ್ಟಿದೆ.
ಇಂದು ಬೆಳಿಗ್ಗೆ 5.6 ಮೀ ಏರಿಕೆಯಾಗಿತ್ತು. ಬೆಳಿಗ್ಗೆಯಿಂದ ಕೊಂಚ ಮಳೆ ಕಡಿಮೆಯಾಗಿದ್ದರಿಂದ ನೀರಿನ ಮಟ್ಟ ಇಳಿಕೆಯಾಗಿದೆ. ಕಳೆದ ಬಾರಿ ಈ ಸಮಯದಲ್ಲಿ ಎರಡು ಬಾರಿ ನೆರೆ ಬಂದಿತ್ತು. ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಕೂಡ ತಲುಪಿತ್ತು.
ಆದರೆ ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ನೇತ್ರಾವತಿ ನದಿ ಸರಿಯಾಗಿ ತುಂಬಿಲ್ಲ. ಅಲ್ಲಲ್ಲಿ ಮರಳು ದಿಬ್ಬಗಳು ಕಾಣುತ್ತಿದ್ದು ಕರಾವಳಿಯ ಜನರು ನೀರಿನ ಅಭಾವ ತಲೆದೋರುತ್ತದೆ ಎಂಬ ಹೆದರಿಕೆಯಲ್ಲಿದ್ದರು.