Thursday, January 23, 2025
ಸುದ್ದಿ

ರಾಜ್ಯದಲ್ಲಿ ಆರ್ಥಿಕ ಮಸೂದೆ ಪಾಸ್ ಆಗದ ಹಿನ್ನಲೆ; ನೌಕರರಿಗೆ ಪಿಂಚಣಿ, ಸಂಬಳ ಬರೊಲ್ಲ – ಕಹಳೆ ನ್ಯೂಸ್

ಬೆಂಗಳೂರು : ಈಗಾಗಲೇ ಮೈತ್ರಿ ಸರ್ಕಾರ ಪತನವಾಗಿದ್ದು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವದಲ್ಲಿಲ್ಲ, ಬಜೆಟ್ ಕೂಡ ಪಾಸ್ ಆಗಿಲ್ಲ, ಹೀಗಾಗಿ ಆಗಸ್ಟ್ 1ರಿಂದ ರಾಜ್ಯದ ಸರ್ಕಾರಿ ನೌಕರರ ಸಂಬಳ ಬಿಡುಗಡೆಯಾಗಲ್ಲ.

ಆ. 1 ರೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ, ವಿಧವಾ ವೇತನ, ವೃದ್ದಾಪ್ಯ ವೇತನ, ಮಾಸಿಕ ಪೆನ್ಷನ್ ಸೇರಿದಂತೆ ಸರ್ಕಾರಿ ನೌಕರರ ಸಂಬಳ ಕೂಡ ಬಿಡುಗಡೆಯಾಗಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದಲ್ಲಿ ಆ.1 ರಿಂದ ಯಾವುದೇ ಪರಿಹಾರ ಬಿಡುಗಡೆಯಾಗುವುದಿಲ್ಲ. 6 ದಿನಗಳ ಒಳಗೆ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಅಂಗೀಕಾರವಾಗಿ, ಆರ್ಥಿಕ ಮಸೂದೆ ಪಾಸ್ ಆಗಬೇಕು, ಇಲ್ಲವಾದಲ್ಲಿ ಸರ್ಕಾರದ ಖಜಾನೆಯಿಂದ ಯಾವುದೇ ರೀತಿಯ ವೇತನ ಸೌಲಭ್ಯಗಳು ಬಿಡುಗಡೆಯಾಗುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು