ಚೆನ್ನೈ: ರಾಜೀವ್ ಗಾಂಧಿ ಹಂತಕಿ ಕಳೆದ 28 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಅವರಿಗೆ ಮದ್ರಾಸ್ ಹೈಕೋರ್ಟ್ ಇದೇ ಮೊದಲ ಬಾರಿಗೆ ಒಂದು ತಿಂಗಳ ಪೆರೋಲ್ ನೀಡಿದೆ.
ನಳಿನಿ ತಮ್ಮ ಮಗಳ ವಿವಾಹಕ್ಕಾಗಿ 30 ದಿನಗಳ ಪೆರೋಲ್ ಮೇಲೆ ವೆಲ್ಲೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಮಗಳ ಮದುವೆಗೆಂದು 6 ತಿಂಗಳ ಕಾಲ ಪೆರೋಲ್ ಕೋರಿದ್ದರು. ಆದರೆ ನ್ಯಾಯಾಲಯ ಅವರಿಗೆ 30 ದಿನಗಳ ಕಾಲಾವಕಾಶ ನೀಡಿದೆ.
ಮಗಳ ಮದುವೆಗೆ ವ್ಯವಸ್ಥೆ ಮಾಡಬೇಕು ಅದಕ್ಕಾಗಿ ಶಿಕ್ಷೆಗೆ ಈಡಾಗಿರುವ ನನಗೆ ಪರಿಹಾರ ಒದಗಿಸಬೇಕೆಂದು ನಳಿನಿ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ವಾದಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಜುಲೈ 5ರಂದು ಅವರಿಗೆ ಒಂದು ತಿಂಗಳ ಪೆರೋಲ್ ನೀಡಿತ್ತು. ಈ 30 ದಿನಗಳಲ್ಲಿ ಯಾವುದೇ ಮಾಧ್ಯಮಗಳನ್ನು ಭೇಟಿಯಾಗಬಾರದು ಅಥವಾ ಮಾತನಾಡಬಾರದು ಎಂದು ನ್ಯಾಯಾಲಯವು ಆದೇಶಿಸಿದೆ.