ಉಪ್ಪಿನಂಗಡಿ ಪೊಲೀಸ್ ಠಾಣಾ, ಪೊಲೀಸ್ ಉಪನಿರೀಕ್ಷಕ ಜುಲೈ 24ರಂದು ಬೆಳಿಗ್ಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಚೆಕ್ ಪಾಯಿಂಟ್ ಎಂಬಲ್ಲಿ ತರಕಾರಿ ಸಾಗಿಸುವ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಮಾಡಿದ್ದಾರೆ. ಅಕ್ರಮವಾಗಿ ಯಾವುದೇ ಪರವಾನಿಗೆಯಾ ದಾಖಲಾತಿಗಳಿಲ್ಲದೇ ವಾಹನ ನಂಬ್ರ ಕೆಎ-19-ಎಸಿ-3809 ರಲ್ಲಿ ಸಾಗಿಸಲಾಗುತ್ತಿದ್ದ 300 ಕೆಜಿ ದನದ ಮಾಂಸವನ್ನು ಮತ್ತು ಪಿಕಪ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಸ್ವಾಧೀನ ಪಡಿಸಿಕೊಂಡ ದನದ ಮಾಂಸದ ಅಂದಾಜು ಮೌಲ್ಯ 92,000 ರೂ ಮತ್ತು ಪಿಕಪ್ ವಾಹನದ ಅಂದಾಜು ಮೌಲ್ಯ 2.00.000 ರೂ ಆಗಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳಾದ ಮಹಮ್ಮದ್ ಇಕ್ಬಾಲ್ ಮತ್ತು ಇಮ್ರಾನ್ ಎಂಬವರನ್ನು ಸ್ಥಳದಲ್ಲಿ ದಸ್ತಗಿರಿ ಮಾಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 4,5,9,11 ಗೋ ಹತ್ಯಾ ನಿಷೇದ ಕಾಯ್ದೆ 1964 ರಂತೆ ಪ್ರಕರಣ ದಾಖಲಾಗಿಸಲಾಗಿದೆ.