Saturday, November 23, 2024
ಸುದ್ದಿ

ಕೋಟೆಕಣಿಯ ರಸ್ತೆಯಲ್ಲೊಂದು ಮೃತ್ಯು ಕೂಪ – ಕಹಳೆ ನ್ಯೂಸ್

ಕಾಸರಗೋಡು: ಕಾಸರಗೋಡು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವೆಂದು ಹೇಳಿಕೊಳ್ಳುತ್ತಿದ್ದರೂ ಈ ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಎಷ್ಟು ಸಮರ್ಥವಾಗಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಕಾಸರಗೋಡು ನಗರಸಭೆಯ ಹೊಸ ಬಸ್ ನಿಲ್ದಾಣದಿಂದ ಕೆಲವೇ ಮೀಟರ್ ದೂರದಲ್ಲಿರುವ ಕೋಟೆಕಣಿಯ ರಸ್ತೆಯನ್ನೊಮ್ಮೆ ನೋಡಿದರೆ ಸಾಕು. ನಗರಸಭೆಯ ಅಭಿವೃದ್ಧಿ ಕಾರ್ಯ ಎಷ್ಟು ಸಮರ್ಥವಾಗಿ ನಡೆಯುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಾಗಿಲ್ಲ. ಕೋಟೆಕಣಿ ರಸ್ತೆಗೆ ಅಪೂರ್ಣವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಈ ರಸ್ತೆಯ ಕಾಂಕ್ರೀಟ್ ಸಮರ್ಥವಾಗಿ ನಿರ್ಮಾಣವಾಗಿಲ್ಲ. ಜಲ್ಲಿ, ರಸ್ತೆಯ ಮೇಲೆ ಎದ್ದು ಕಾಣಿಸುತ್ತಿದೆ. ರಸ್ತೆಯ ಬದಿಮಣ್ಣು ತುಂಬಿದ ಚರಂಡಿ ಒಂದೆಡೆಯಾದರೆ, ಇನ್ನೂ ಕೆಲವೆಡೆ ಚರಂಡಿ ಮೃತ್ಯು ಕೂಪವಾಗಿ ಬದಲಾಗಿದೆ. ರಸ್ತೆ ಬದಿಯ ಚರಂಡಿಗೆ ಹಾಕಿದ ಸಿಮೆಂಟ್ ಸ್ಲ್ಯಾಬ್‍ಗಳು ಮುರಿದು ಬಿದ್ದು ಚರಂಡಿಗೆ ಮುಚ್ಚುಗಡೆ ಇಲ್ಲದೆ ಅಪಾಯವನ್ನು ಕೈಬೀಸಿ ಕರೆಯುವಂತಿದೆ.
ರಸ್ತೆಯ ಪಕ್ಕದಲ್ಲೇ ಮೃತ್ಯು ಕೂಪ ಇರುವುದರಿಂದ ಪಾದಚಾರಿಗಳಿಗೆ, ವಾಹನಗಳಿಗೆ ಅಪಾಯ ತಪ್ಪಿದ್ದಲ್ಲ. ಈ ಹೊಂಡಕ್ಕೆ ಬಿದ್ದಲ್ಲಿ ಕೈಕಾಲು ಮುರಿವುದಂತೂ ಖಚಿತ. ಅಪಾಯ ಸಂಭವಿಸುವ ಮುನ್ನವೇ ನಗರಸಭೆ ಕಣ್ಣು ತೆರೆಯಬೇಕಾಗಿದೆ. ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು