Monday, January 20, 2025
ಸುದ್ದಿ

ಊರುಬೈಲು ಸೇತುವೆಯ ದುರಸ್ತಿಯಲ್ಲಿ ಸಹಕರಿಸಿದ ಶ್ರೀ ಭಗವಾನ್ ಸಂಘ ಸದಸ್ಯರು – ಕಹಳೆ ನ್ಯೂಸ್

ಸಂಪಾಜೆ: ಕಳೆದ ವರ್ಷದ ಕೊಡಗಿನ ಭೀಕರ ಜಲಪ್ರಳಯದಲ್ಲಿ ಹಾನಿಗೀಡಾದ ಊರುಬೈಲು ಸೇತುವೆಯನ್ನು ತಾತ್ಕಾಲಿಕವಾಗಿ ಜಿಲ್ಲಾಡಳಿತ ದುರಸ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಟ್ಟಿತ್ತು. ಆದರೆ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಮತ್ತೊಮ್ಮೆ ಊರುಬೈಲು ಸೇತುವೆಗೆ ಹಾನಿಯಾಗಿದ್ದು, ದೊಡ್ಡ ದೊಡ್ಡ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿದ್ದು, ಸೇತುವೆ ಭಾಗಶಃ ಹಾನಿಗೀಡಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಜುಲೈ 24ರಂದು ಸ್ಥಳೀಯ ನಾಯಕರಾದ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯನ್. ಎಸ್ ಅನಂತ್ ಅವರ ಮುಂದಾಳತ್ವದಲ್ಲಿ ಸ್ಥಳೀಯ ಯುವಕರು ಮತ್ತು ಶ್ರೀ ಭಗವಾನ್ ಸಂಘದ ಸದಸ್ಯರು ಶ್ರಮದಾನ ಮಾಡಿ, ಸೇತುವೆಯನ್ನು ದುರಸ್ತಿಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು