Tuesday, January 21, 2025
ಸುದ್ದಿ

ಬೈಕ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ- ಇಬ್ಬರಿಗೆ ಗಾಯ – ಕಹಳೆ ನ್ಯೂಸ್

ಕಡಬ: ಬೈಕ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರರು ಗಾಯಗೊಂಡ ಘಟನೆ ಮರ್ದಾಳ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಐತೂರಿನ ಮರ್ದಾಳ -ಕೊಣಾಜೆ ರಸ್ತೆ ತಿರುವಿನಲ್ಲಿ ನಡೆದಿದೆ.

ಈ ಘಟನೆಯಲ್ಲಿ ಗೋಪಾಲ ಕೊಂಬಾರು ಮತ್ತು ಬಿಳಿನೆಲೆ ನೆಟ್ಟಣ ರಬ್ಬರ್ ನಿಗಮದ ನಿವೃತ್ತ ಮೇಲ್ವಿಚಾರಕ ಜಯಪ್ರಕಾಶ್ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬದಿಂದ ಕೊಂಬಾರು ಕಡೆಗೆ ಹೋಗುತ್ತಿದ್ದ ನಂಬರ್ ಆಗದ ಹೊಸ ಸ್ಕೂಟಿ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸಂಪೂರ್ಣ ಜಜ್ಜಿ ಹೋಗಿದ್ದರೆ, ಬೈಕ್ ಕೂಡಾ ಡ್ಯಾಮೇಜ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು