Wednesday, January 22, 2025
ಸುದ್ದಿ

ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ – ಕಹಳೆ ನ್ಯೂಸ್

ಧನಾತ್ಮಕ ದೃಷ್ಟಿಕೋನದ ಪತ್ರಿಕೋದ್ಯಮದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮ ಮತ್ತು ಪ್ರಚಲಿತ ವಿದ್ಯಮಾನ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಸಂಸ್ಕೃತಿ, ಪರಂಪರೆಯ ನೆಲೆಗಟ್ಟನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಮಾಧ್ಯಮಗಳು ಸೇತುವೆಯಾಗಿ ಕಾರ್ಯ ನಿರ್ವಹಿಸುತಿವೆ. ಸ್ವಾತಂತ್ರ್ಯವನ್ನೂ, ಪ್ರಜಾಪ್ರಭುತ್ವವನ್ನೂ ಜನರು ಸರಿಯಾಗಿ ಉಪಯೋಗಿಸದಿದ್ದರೆ ವ್ಯವಸ್ಥೆಗೆ ತುಕ್ಕು ಹಿಡಿಯಬಹುದು, ನಮ್ಮ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಆದರೆ ಇಂದು ಮಾಧ್ಯಮಗಳು ಸ್ವಯಂ ಅವಲೋಕನ ಮಾಡುವುದರ ಜೊತೆಗೆ ಧನಾತ್ಮಕ ಸುದ್ದಿಗಳನ್ನು ಹುಡುಕಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

‘ಮಾದಕ ವಸ್ತು ತಡೆ ಜಾಗೃತಿಯಲ್ಲಿ ಸಮಾಜದ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ನಮ್ಮ ಹಿರಿಯರು ಬದುಕಿದಂತೆ ಇಂದಿನ ಯುವಜನತೆಗೆ ಯಾಕೆ ಬದುಕಲು ಸಾಧ್ಯವಾಗುತ್ತಿಲ್ಲ ಎಂಬ ದೊಡ್ಡ ಪ್ರಶ್ನೆ ನಮ್ಮದು ಎಂದರು.