Wednesday, January 22, 2025
ಸುದ್ದಿ

ಶಾಲೆಗೆ ಹೋಗುತ್ತಿದ್ದ ಬಾಲಕನ ಅಪಹರಣ ಯತ್ನ – ಕಹಳೆ ನ್ಯೂಸ್

ಉಡುಪಿ: ಬಸ್‍ನಿಂದ ಇಳಿದು ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಅಪಹರಣ ಮಾಡುವ ಪ್ರಯತ್ನ ನಡೆಸಿದ್ದು, ಬಾಲಕ ತಪ್ಪಿಸಿಕೊಂಡ ಘಟನೆ ಪರ್ಕಳದಲ್ಲಿ ಗುರುವಾರ ನಡೆದಿದೆ.

ಆತ್ರಾಡಿ ನಿವಾಸಿ ಎಂಟನೇ ತರಗತಿ ವಿದ್ಯಾರ್ಥಿ ಶರತ್ ನಾಯಕ್ (12) ಅಪಹರಣಕಾರರಿಂದ ತಪ್ಪಿಸಿಕೊಂಡ ಬಾಲಕ.
ಶರತ್ ಇಂದು ಬೆಳಗ್ಗೆ ಶಾಲೆಗೆ ಹೋಗುವ ಸಲುವಾಗಿ ಪರ್ಕಳದಲ್ಲಿ ಬಸ್ಸಿನಿಂದ ಇಳಿದಿದ್ದ. ಆ ವೇಳೆ ಕೆಂಪು ಕಾರಿನಲ್ಲಿ ಬಂದ ಅಪರಿಚಿತರು ಶರತ್‍ನನ್ನು ಅಪಹರಣಗೈಯಲು ಕಾರಿನೊಳಗೆ ಎಳೆದು ಕೊಂಡಿದ್ದರು. ಪರ್ಕಳ ಅಶ್ವಥಕಟ್ಟೆ ಕಡೆ ಸಾಗಿದ ಅಪಹರಣಕಾರರು, ಆ ರಸ್ತೆ ಅಲ್ಲೇ ಕೊನೆಯಾದಾಗ ಮತ್ತು ಹಿಂದಿನಿಂದ ಬೊಗಳಿಕೊಂಡು ಅಟ್ಟಿಸಿಕೊಂಡು ಬರುತ್ತಿದ್ದ ನಾಯಿಗೆ ಭಯಗೊಂಡು ಬಾಲಕನನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು