Wednesday, January 22, 2025
ಸುದ್ದಿ

ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡ ಶಾಸಕ ಸುನಿಲ್ ನಾಯ್ಕ್ – ಕಹಳೆ ನ್ಯೂಸ್

ಭಟ್ಕಳ:ಭಟ್ಕಳ ತಾಲ್ಲೂಕಿನ ಬೆಳ್ಕೆ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇಮಿಡಿ ಶಾಲೆಗೆ ಕೆಲ ತಿಂಗಳ ಹಿಂದೆ 10 ಲಕ್ಷ ರೂ ವೆಚ್ಚದಲ್ಲಿ ನೂತನ ಕೊಠಡಿಯನ್ನು ನಿರ್ಮಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಶಾಲೆಯ ಹಳೆಯ ಎರಡು ಕೊಠಡಿಗಳು ಕುಸಿದು ಬಿದ್ದಿದೆ. ಕಾರಣ ಕ್ಷೇತ್ರದ ಶಿಕ್ಷಣಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಶಾಸಕ ಸುನಿಲ್ ನಾಯ್ಕ್, ಶಾಲಾ ಮಕ್ಕಳ ಹಿತದೃಷ್ಟಿಯಿಂದ, ಆ ಎರಡು ಕೊಠಡಿಗಳನ್ನು ಸಂಪೂರ್ಣ ನೆಲಸಮ ಮಾಡುವಂತೆ ಆದೇಶಿಸಿದ್ದರು. ಮತ್ತು ಸಂಪೂರ್ಣ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ. ಕಟ್ಟಡದ ಕಾಮಾಗಾರಿ ಭರದಿಂದ ಸಾಗುತ್ತಿದೆ. ಶಾಸಕರ ಸಹಕಾರಕ್ಕೆ ಊರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು