Monday, November 25, 2024
ಸುದ್ದಿ

ಕಾಡು ಕೋಣ ಸಾವು : ಮೃತ ದೇಹವನ್ನು ಸುಟ್ಟ ಅರಣ್ಯ ಅಧಿಕಾರಿಗಳು – ಕಹಳೆ ನ್ಯೂಸ್

ಬಂಟ್ವಾಳ : ಕಾಡು ಕೋಣವೊಂದು ರೈಲು ಬರುವ ವೇಳೆ ಹೆದರಿ ಓಡಿ ಹೋದಾಗ, ಮರದ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ, ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗು ಗಂಗೆಪಾಲು ಎಂಬಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಸಂಜೆಯ ವೇಳೆ ಸ್ಥಳೀಯರು ಗುಡ್ಡೆಗೆ ಸೊಪ್ಪು ತರಲು ಹೋಗುವ ವೇಳೆ ಘಟನೆ ಬೆಳಕಿಗೆ ಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಧಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು, ಸುಮಾರು 4 ವರ್ಷ ಪ್ರಾಯದ ಗಂಡು ಕಾಡು ಕೋಣವೊಂದು, ರೈಲು ಹಳಿಯನ್ನು ದಾಟುವ ವೇಳೆ ರೈಲಿನ ಶಬ್ದಕ್ಕೆ ಓಡಿ ಹೋಗಿ, ಮರಕ್ಕೆ ಕತ್ತು ಹಾಗೂ ಕೊಂಬು ತಾಗಿ ಸತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳಾದ ಜಿತೇಶ್, ಯಶೋಧರ ದಯಾನಂದ, ಕ್ಯಾತಲಿಂಗ, ಪ್ರವೀಣ್ ಮತ್ತು ಯೋಗೀಶ್ ವಾಹನ ಚಾಲಕ ಜಯರಾಮ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಾಡುಕೋಣದ ಮೃತದೇಹವನ್ನು ಬೆಂಕಿಯಲ್ಲಿ ಸುಟ್ಟು ಬಳಿಕ ಮಣ್ಣಿನಲ್ಲಿ ಹೂಳಲಾಯಿತು.