ಬಿ.ಸಿ. ರೋಡ್-ಮೆಲ್ಕಾರ್ ಮಧ್ಯೆ ರಾ.ಹೆ 75ರಲ್ಲಿ ಮರಣ ಗುಂಡಿಗಳು; ಸ್ವಲ್ಪ ಎಚ್ಚರ ತಪ್ಪಿದರು ಅನಾಹುತ ಗ್ಯಾರಂಟಿ – ಕಹಳೆ ನ್ಯೂಸ್
ಬಂಟ್ವಾಳ: ಸಾಮಾನ್ಯವಾಗಿ ಹೆದ್ದಾರಿಯೆಂದರೆ ಸುಸಜ್ಜಿತವಾಗಿದ್ದು, ಪ್ರಯಾಣವೂ ಹೆಚ್ಚು ಅನುಕೂಲಕರ ವಾಗಿರುತ್ತದೆ. ಆದರೆ ಹೆದ್ದಾರಿಯ ಬಿ.ಸಿ. ರೋಡ್-ಮೆಲ್ಕಾರ್ ಮಧ್ಯೆ ಮರಣ ಗುಂಡಿಗಳೇ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಈ ಬಾರಿ ಮಳೆ ಕಡಿಮೆಯಿದ್ದರೂ ಹೆದ್ದಾರಿಯ ಹೊಂಡಗಳಿಗೇನು ಕೊರತೆಯಾಗಿಲ್ಲ. ಬಿ.ಸಿ. ರೋಡ್, ಪಾಣೆಮಂಗಳೂರು, ಮೆಲ್ಕಾರ್ ಜಂಕ್ಷನ್‍ಗಳಲ್ಲೂ ಬೃಹತ್ ಗಾತ್ರದ ಹೊಂಡಗಳಿದ್ದು, ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ಇದೆ.
ದ್ವಿಚಕ್ರ ವಾಹನ ಸವಾರರು ಹಾಗೂ ಸಣ್ಣ ವಾಹನಗಳ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.
ಈ ಹಿಂದೆ ಹೆದ್ದಾರಿಯ ಹೊಂಡಗಳನ್ನು ಮುಚ್ಚಲಾಗಿತ್ತಾದರೂ ಅಲ್ಪ ಮಳೆಯಲ್ಲೇ ಹೊಂಡಗಳು ಸೃಷ್ಟಿ ಯಾಗಿವೆ. ವಾಹನಗಳು ಬೃಹತ್ ಹೊಂಡಕ್ಕೆ ಇಳಿದೇ ಸಾಗುವುದರಿಂದ ದಿನದಿಂದ ದಿನಕ್ಕೆ ಹೊಂಡಗಳ ಗಾತ್ರವೂ ಹೆಚ್ಚುತ್ತಿದೆ.