Thursday, January 23, 2025
ಸುದ್ದಿ

ಅಸಾಯಕ ವೃದ್ದರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಉಪ್ಪಿನಂಗಡಿ: ಮನೆಯವರಿಂದ ದೂರವಾಗಿ, ಬಸ್ ನಿಲ್ದಾಣದಲ್ಲಿ ಮಲಗಿದ್ದ ಅನಾರೋಗ್ಯ ಪೀಡಿತ ವೃದ್ದನನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಪೊಲೀಸರ ನೆರವಿನೊಂದಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಿರೇಬಂಡಾಡಿ ನಿವಾಸಿ ಕೊರಗಪ್ಪ ಪೂಜಾರಿ ಎಂಬವರು 10 ದಿನಗಳಿಂದ ನಡೆಯಲಾರದ ಸ್ಥಿತಿಯಲ್ಲಿ ಬಸ್ ನಿಲ್ದಾಣದಲ್ಲೇ ಬಿದ್ದುಕೊಂಡಿದ್ದರು. ವಿದ್ಯಾರ್ಥಿಗಳು ಕೊರಗಪ್ಪ ಪೂಜಾರಿ ಅವರನ್ನು ಮಾತನಾಡಿಸಿ, ಅವರಿಂದ ಮಾಹಿತಿ ಪಡೆದು ಪತ್ನಿ ಹಾಗೂ ಮಕ್ಕಳನ್ನು ಸಂಪರ್ಕಿಸಿದರೂ ಅವರು ಬರಲು ನಿರಾಕರಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಅಶ್ವಿನಿ, ಚೈತ್ರಾ, ಬೀನಾ, ದಾಮೋದರ, ತೇಜಸ್ವಿ, ನವ್ಯಾ, ಅಶ್ವಿತಾ, ಸುಶ್ಮಿತಾ, ದೀಕ್ಷಾ ಹಾಗೂ ಶಂಕರ್ ಅವರು ಕೊರಗಪ್ಪ ಅವರನ್ನು ಉಪಚರಿಸಿ, 108 ಅ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಸಿಬ್ಬಂದಿ ಮಧು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು. ಈ ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿ.

ಜಾಹೀರಾತು
ಜಾಹೀರಾತು
ಜಾಹೀರಾತು