Thursday, January 23, 2025
ಸುದ್ದಿ

ವಿಜ್ಞಾನ ಸಂಘ ಉದ್ಘಾಟಣಾ ಕಾರ್ಯಕ್ರಮ : ಅಸಾಧ್ಯವೇ ಸಾಧ್ಯತೆಯೆಡೆಗಿನ ದಾರಿ: ಡಾ.ಮಂಜುನಾಥ್ – ಕಹಳೆ ನ್ಯೂಸ್

ಪುತ್ತೂರು: ಅಸಾಧ್ಯವೇ ನಮ್ಮನ್ನು ಸಾಧ್ಯತೆಯೆಡೆಗೆ ಕರೆದುಕೊಂಡು ಹೋಗುತ್ತದೆ. ಈ ಸಾಧ್ಯತೆಯೆಡೆಗಿನ ಪರಿಶ್ರಮ ಹಾಗೂ ಪರಿಪೂರ್ಣತೆ ವಿದ್ಯಾರ್ಥಿಗಳಿಂದ ಸಾಧ್ಯ. ವಿದ್ಯಾರ್ಥಿಗಳಲ್ಲಿ ಜ್ಞಾನದೊಂದಿಗೆ ಮುಂದೆ ಬರುವ ಧೈರ್ಯವನ್ನು ವಿಜ್ಞಾನ ಸಂಘವು ತುಂಬುತ್ತದೆ. ಈ ವೇದಿಕೆ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಸಿ.ಕೆ. ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಪದವಿ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ, ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು. ಬಳಿಕ ಮಾತನಾಡಿದ ಇವರು ಕಾಲೇಜಿನಲ್ಲಿ ಇರುವ ಇಂತಹ ಸಂಘಗಳು, ವಿದ್ಯಾರ್ಥಿಗಳ ಮನೋಬಲವನ್ನು ವೃದ್ಧಿಸುತ್ತದೆ. ಅದರೊಂದಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.

ವಿಜ್ಞಾನ ಸಂಘದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರಚಿತಾ, ತಷ್ಮಾ ಹಾಗೂ ತೃಪ್ತಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷೆ ಕೆ.ಎಸ್. ಆಶಾದೇವಿ ಸ್ವಾಗತಿಸಿದರು. ಕಾರ್ಯದರ್ಶಿ ಪವನ್ ಕುಮಾರ್ ಎ. ವಂದಿಸಿದರು. ದ್ಯಾರ್ಥಿನಿಯರಾದ ಪ್ರೇಕ್ಷಿತಾ ಬಿ., ಸುನಯನ ಹಾಗೂ ಬಶೀಶಾ ವಾರಲೈತ್ಮ ಕಾರ್ಯಕ್ರಮವನ್ನು ನಿರೂಪಿಸಿದರು.